ಪುತ್ರನ ಪರ ಪ್ರಚಾರ ಆರಂಭಿಸಿದ ಸಿಎಂ ಸಿದ್ದರಾಮಯ್ಯ

ಇನ್ನು 218 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆಯಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಪ್ರಚಾರಕ್ಕೆ ಇಳಿದಿದ್ದಾರೆ. ವರಣಾ ಕ್ಷೇತ್ರದಲ್ಲಿ ತಮ್ಮ ಪುತ್ರ ಡಾ. ಯತೀಂದ್ರ ಪರ ಸಿಎಂ ಪ್ರಚಾರ ನಡೆಸುತ್ತಿದ್ದಾರೆ. ಮೈಸೂರು ಜಿಲ್ಲೆ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಣನೂರು, ದಾಸನೂರು, ತಗಡೂರು, ಮಲ್ಲೂಪುರ, ನಗರ್ಲೆ, ಬೆಳಗೆರ, ತಾಯೂರು, ಸುತ್ತೂರು, ಹೊಸಕೋಟೆ, ಹದಿನಾರು, ಹುಳಿಮಾವು, ಕೆಂಪಿಸಿದ್ದನಹುಂಡಿ, ತಾಂಡವಪುರ, ಗೊದ್ದನಪುರ, ರಾಂಪುರ ಭಾಗಗಳಲ್ಲಿ ಪ್ರಚಾರ.ಕೋಣನೂರು ಗ್ರಾಮದಲ್ಲಿ ಅಬ್ಬರದ ರೋಡ್ ಶೋ.ದಾಸನೂರು ಗ್ರಾಮದಲ್ಲಿ ಮಂಗಳಾರತಿ ಬೆಳಗಿ ಬರಮಾಡಿಕೊಂಡ ಮಹಿಳೆಯರು. ದಾರಿಯುದ್ದಕ್ಕೂ ಮೈಸೂರು ಹುಲಿ ಎಂದು ಜೈಕಾರ ಘೋಷಣೆ.ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಡಾ ಯತೀಂದ್ರಸಿದ್ದರಾಮಯ್ಯನವರ ಪರ ಪ್ರಚಾರ. ಸಿದ್ದರಾಮಯ್ಯ ಜೊತೆ ಯತೀಂದ್ರ ಕೂಡ ಉಪಸ್ಥಿತಿ.

0

Leave a Reply

Your email address will not be published. Required fields are marked *