ಸಾಂಸ್ಕೃತಿಕ ನಗರಿಯಲ್ಲಿ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ….

ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಇಂದಿರಾ ಕ್ಯಾಂಟೀನ್​ನನ್ನು ಇಂದು ಸಿಎಂ ಸಿದ್ದರಾಮಯ್ಯ ಸಾಂಸ್ಕೃತಿಕ ರಾಜಧಾನಿಯಲ್ಲಿ ಲೋಕಾರ್ಪಣೆ ಮಾಡಿದ್ರು. ಬಡವರ ಹೊಟ್ಟೆ ತುಂಬಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಯೋಜನೆಗೆ ರಾಜ್ಯಾದ್ಯಂತ ಭಾರೀ ಮನ್ನಣೆಯನ್ನು ಪಡೆಯುತ್ತಿದೆ.ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್​ ನನ್ನು ಸಿಲಿಕಾನ್​ ಸಿಟಿಯಲ್ಲದೆ ರಾಜ್ಯದೆಲ್ಲೆಡೆ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ, ಇಂದು ಅರಮನೆ ನಗರಿ ಮೈಸೂರಲ್ಲೂ ಇಂದಿರಾ ಕ್ಯಾಂಟೀನ್​ಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ರು, ಇನ್ನು ಬಡವರ ಹಸಿವನ್ನು ನೀಗಿಸಸುವ ಸಲುವಾಗಿ ಮೈಸೂರಿನ 11 ಕಡೆ ಇಂದು ಲೋಕಾರ್ಪಣೆಯಾಯ್ತು.

ರಾಜ್ಯ ಕಾಂಗ್ರೆಸ್​ ಸರ್ಕಾರ ರಾಜ್ಯದ ಜನರಿಗೆ ಕಡಿಮೆ ಬೆಲೆಯಲ್ಲಿ ಹಸಿದವರಿಗೆ ಮೂರು ಹೊತ್ತಿನ ಆಹಾರ ನೀಡಲು ಮುಂದಾಗಿದ್ದಾರೆ.ಈಗಾಗಲೇ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟಿನ್ ಆರಂಭವಾಗಿದೆ. ಮೈಸೂರು ಜಿಲ್ಲೆಯಾದ್ಯಂತ ಒಟ್ಟು 17 ಕ್ಯಾಂಟೀನ್ ಗಳಿದ್ದು ಮೈಸೂರು ನಗರದಲ್ಲಿ 11 ಕ್ಯಾಂಟೀನ್​ಗಳಿವೆ, ಉಳಿದ 6 ಕ್ಯಾಂಟೀನ್ ಗಳು ಜಿಲ್ಲೆಯ ತಾಲ್ಲೂಕು ಕೇಂದ್ರದಲ್ಲಿ ನಿರ್ಮಾಣವಾಗಿವೆ‌. ಇನ್ನು ಪ್ರತಿಯೊಂದು ಕ್ಯಾಂಟೀನ್​ಗಳು ಗೂಗಲ್ ಮ್ಯಾಪ್ ನಲ್ಲಿ ಸ್ಥಳ ತೋರಿಸುವಂತೆ ಅಭಿವೃದ್ಧಿ ಪಡಿಸಲಾಗಿದೆ.

ಇಂದಿರಾ ಕ್ಯಾಂಟೀನ್​ನನ್ನು ಲೋಕಾರ್ಪಣೆ ಮಾಡಿದ ಸಿಎಂ ಸಿದ್ದರಾಮಯ್ಯ ಉಪ್ಪಿಟ್ಟು, ಕೇಸರಿಬಾತ್ ಸವಿದ್ರು. ಇನ್ನು ಮೈಸೂರಿನಲ್ಲಿ ನಿರ್ಮಾಣವಾಗ್ತಿರೋ ಎರಡನೇ ಹಂತದ ಇಂದಿರಾ ಕ್ಯಾಂಟೀನ್ಗಳು ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಕ್ಯಾಂಟೀನ್ಗಳಲ್ಲಿ ಒಂದು ಹೊತ್ತಿಗೆ 500 ಜನರಿಗೆ ಬೇಕಾಗುವಷ್ಟು, ಅಂದರೆ ಒಂದು ದಿನಕ್ಕೆ 1,500ರಷ್ಟು ಜನರಿಗೆ ಆಹಾರವನ್ನು ಪ್ರತಿದಿನ ವಿತರಿಸಲು ನಿರ್ಧರಿಸಲಾಗಿದೆ.ಒಟ್ಟಾರೆ, ಸಿಎಂ ಸಿದ್ದರಾಮಯ್ಯ ಅವರು ತಮ್ಮ ತವರಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸುವ ಮೂಲಕ ಬಡವರ ಹಸಿವು ನೀಗಿಸುವ ಯತ್ನಕ್ಕೆ ನಾಂದಿ ಹಾಡಿದ್ದಾರೆ.
ರವಿಪಾಂಡವಪುರ, ಸುದ್ದಿಟಿವಿ, ಮೈಸೂರು

0

Leave a Reply

Your email address will not be published. Required fields are marked *