ಬಿಡದಿ ಪುರಸಭೆ ವಿರುದ್ಧ ನಾಗರೀಕರ ಪ್ರತಿಭಟನೆ

ರಾಮನಗರ: ಕುಡಿಯುವ ನೀರು ಪೂರೈಕೆ, ಬೀದಿ ದೀಪ ನಿರ್ವಹಣೆ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಲು ವಿಫಲವಾಗಿರುವ ರಾಮನಗರದ ಬಿಡದಿ ಪುರಸಭೆ ವಿರುದ್ದ 3ನೇ ವಾರ್ಡ್​​ನ ಜನತ ಕಾಲೋನಿ ನಾಗರೀಕರು ಇಂದು ಪ್ರತಿಭಟನೆ ನಡೆಸಿದರು. ಪುರಸಭೆಯಾಗಿ 2 ವರ್ಷವಾದರೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪುರಸಭೆ ಆಡಳಿತ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪುರಸಭಾ ಸದಸ್ಯ ಕುಮಾರ್ ನೇತೃತ್ವದಲ್ಲಿ ಪುರಸಭಾ ಮುಖ್ಯಾಧಿಕಾರಿ ಸುಮಾ, ಅಧ್ಯಕ್ಷೆ ವೆಂಕಟೇಶಮ್ಮ ರಾಮಕೃಷ್ಣಯ್ಯ ಅವರನ್ನು ನಾಗರೀಕರು ತರಾಟೆಗೆ ತೆಗೆದುಕೊಂಡರು. ಕಳೆದ 15 ದಿನಗಳಿಂದ ನೀರಿಲ್ಲದೆ ಪರದಾಡುತ್ತಿರುವ ನಾಗರೀಕರು, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು, ಈಗಿರುವ ನೀರು ಗಂಟಿಯನ್ನು ಬದಲಾಯಿಸಬೇಕೆಂದು ಆಗ್ರಹಿಸಿದರು.

0

Leave a Reply

Your email address will not be published. Required fields are marked *