ಟೆಸ್ಟ್ ಸ್ಪೆಷಲಿಸ್ಟ್ ಅಂತಾನೆ ಪ್ರಖ್ಯಾತಿಯಾಗಿರೋ ಚೇತೇಶ್ವರ್ ಐಪಿಎಲ್ ಟೈಮ್ನಲ್ಲಿ ಏನ್ಮಾಡ್ತಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಇದೀಗ, ಪೂಜಾರಾ ಐಪಿಎಲ್ ಟೈಮ್ನಲ್ಲಿ ಏನ್ಮಾಡ್ತಾರೆ ಎಂಬುದಕ್ಕೆ ಉತ್ತರ ಸಿಕ್ಕಿದೆ. ಆತ ಟೀಮ್ ಇಂಡಿಯಾದ ಸ್ಟಾರ್ ಟೆಸ್ಟ್ ಸ್ಪೆಷಲಿಸ್ಟ್.. ದ್ರಾವಿಡ್ ನಂತರ ಮೂರನೇ ಸ್ಥಾನಕ್ಕೆ ಬಲ ತುಂಬಿದ ಪ್ಲೇಯರ್.. ಪಂದ್ಯದ ಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡುವುದನ್ನು ಕರಗತ ಮಾಡಿಕೊಂಡ ಬ್ಯಾಟ್ಸ್ಮನ್.. ಯಾರೇ ಎದುರಾಳಿ ಇದ್ದರೂ, ರನ್ ಹೊಳೆ ಹರಿಸುವ ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರ.. ಪ್ರಸಕ್ತ ವರ್ಷ ನಡೆದ ಟೆಸ್ಟ್ನಲ್ಲಿ ರನ್ ಚಿತ್ತಾರ ಬಿಡಿಸಿರುವ ಮೋಡಿಗಾರ.
ಆದ್ರೀಗ ದಕ್ಷಿಣ ಆಫ್ರಿಕಾ ಸರಣಿ ಬಳಿಕ ಪೂಜಾರ ಏನ್ಮಾಡ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಏಪ್ರಿಲ್ನಲ್ಲಿ ಭಾರತದಲ್ಲಿ ಐಪಿಎಲ್ ನಡೆದ್ರೆ, ಪೂಜಾರಾ ಮಾತ್ರ ಐಪಿಎಲ್ನಿಂದ ದೂರವಿರಲಿದ್ದಾರೆ. ಯಾಕಂದ್ರೆ, ಪೂಜಾರ ಕಳೆದೆರೆಡು ವರ್ಷಗಳಿಂದ ಐಪಿಎಲ್ನಲ್ಲಿ ಆಡ್ತಿಲ್ಲ.ಟೆಸ್ಟ್ ಕ್ರಿಕೆಟರ್ ಆಗಿರೋ ಪೂಜಾರ, ಐಪಿಎಲ್ ಸಮಯದಲ್ಲಿ ಇಂಗ್ಲೆಂಡ್ನಲ್ಲಿ ಕೌಂಟಿ ಕ್ರಿಕೆಟ್ ಆಡೋಕೆ ತೆರಳಿದ್ದಾರಂತೆ. ಕಳೆದ ಬಾರಿಯೂ ಪೂಜಾರ ಕೌಂಟಿ ಕ್ರಿಕೆಟ್ ಆಡಿದ್ದು, ನಾಟಿಂಗ್ಹ್ಯಾಮ್ಶೈರ್ ಪರ ಬ್ಯಾಟ್ ಬೀಸಿದ್ರು.
ಆದ್ರೀಗ ಮತ್ತೆ ಕೌಂಟಿ ಕ್ರಿಕೆಟ್ನಲ್ಲಿ ಪೂಜಾರ ಆಡೋಕೆ ತಯಾರಿ ನಡೆಸಿದ್ದಾರೆ. ಈ ಬಾರಿಯೂ ಹೊಸ ತಂಡದೊಂದಿಗೆ ಪೂಜಾರಾ ಕಣಕ್ಕಿಳಿಯಲು ನಿರ್ಧರಿಸಿದ್ದು, ಯಾರ್ಕ್ ಶೈರ್ ಪರ ಆಡೋಕೆ ಕಾತುರರಾಗಿದ್ದಾರೆ. ಈ ಹಿಂದೆ ಪೂಜಾರ ಜೊತೆ ಆರ್.ಅಶ್ವಿನ್ ಕೂಡ ಕೌಂಟಿ ಕ್ರಿಕೆಟ್ನಲ್ಲಿ ಪಾಲ್ಗೋಂಡಿದ್ರು. ಒಟ್ನಲ್ಲಿ ಪೂಜಾರ ಕೌಂಟಿ ಕ್ರಿಕೆಟ್ನಲ್ಲೂ ತಮ್ಮ ಸಾಮರ್ಥ್ಯವನ್ನ ಪ್ರೂವ್ ಮಾಡಲಿ ಅನ್ನೋದೆ ಅಭೀಮಾನಿಗಳ ಆಶಯ….
ಸ್ಪೋರ್ಟ್ಸ್ ಬ್ಯೂರೋ ಸುದ್ದಿಟಿವಿ