ಇದು ದರ್ಶನ್​​​​ರ​ ದುರ್ಯೋದನ ಪಾತ್ರದ ಜಲಕ್​….

ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರ ಸೆಟ್ಟೇರಿದಾಗಿನಿಮಧಲೂ ಸಾಕಷ್ಟು ಕುಇತೂಹಲ ಕೆರಳಿಸಿದೆ..ಅದ್ರಲ್ಲೂ ದರ್ಶನ್​ ಅಭಿಮಾನಿಗಳಿಗೆ ದರ್ಶನ್​ ಅವ್ರ ಗೆಟಪ್ , ಆ ಗೆಟಪ್​ನಲ್ಲಿ ಅವ್ರು ಹೇಗೆ ಕಾಣಿಸ್ತಾರೆ ಹೀಗೆ ಹಲವಾರು ಕೂತೂಹಲಗಳಿವೆ..ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ಕುರುಕ್ಷೇತ್ರ ಚಿತ್ರ ಶೂಟಿಂಗ್ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಲೇ ಇದೆ. ದುರ್ಯೋಧನ ಪಾತ್ರದಲ್ಲಿ ದರ್ಶನ್ ಕಂಗೊಳಿಸುತ್ತಿದ್ದು, ದಿನಕ್ಕೊಂದು ಗೆಟಪ್ ಬಿಡುಗಡೆಯಾಗುತ್ತಿದೆ.

ದರ್ಶನ್ ಅವರು ದುರ್ಯೋದನನ ಪಾತ್ರದಲ್ಲಿ ಸಖತ್​ ಖಡಕ್​ ಆಗೇ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಸಖತ್​ ಕ್ಯೂರಿಯಾಸಿಟಿ ಹುಟ್ಟಿದೆ..ಅಲ್ಲದೇ ಅಭಿಮಾನಿಗಳು ಸಿನಿಮಾ ಹೇಗೆ ಮೂಡಿಬರಲಿದೆ,,ದರ್ಶನ್​ ಅವ್ರ ಅಭಿನಯವನ್ನ ತೆರೆಮೇಲೆ ನೋಡಲು ಕಾತುರರಾಗಿದ್ದಾರೆ..ಇನ್ನು ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್​ ವೇಷಭೂಷಣ, ಅವರ ಕೈಯಲ್ಲಿರುವ ಗದೆ, ಅವರು ಹಾಕಿಕೊಂಡಿರುವ ಚಪ್ಪಲಿ.. ಎಲ್ಲವೂ ಅದ್ಧೂರಿ ಮತ್ತು ಅಬ್ಬರದಿಂದ ಕೂಡಿದೆ. ದುರ್ಯೋಧನ ದರ್ಶನ್ ಮೈಮೇಲೆ ಇಷ್ಟೆಲ್ಲಾ ಆಭರಣಗಳನ್ನ ನೋಡಿದ ಮೇಲೆ.. ದರ್ಶನ್ ಕೈಯಲ್ಲಿರುವ ಗದೆ ಹಾಗೂ ಆಭರಣಗಳ ತೂಕ ಎಷ್ಬಟಿರಬಹುದೆಂದು ಅನುಮಾನ ಮೂಡೋದು ಸಹಜ…

ದುರ್ಯೋಧನ’ನಿಗಾಗಿ ಡಿಸೈನ್ ಮಾಡಿಸಿರುವ ಕಚ್ಚೆ, ಮೈಮೇಲೆ ಹಾಕಿರುವ ಒಡವೆಗಳು, ತಲೆ ಮೇಲೆ ಕಿರೀಟ, ಕೈಯಲ್ಲಿ ಗದೆ, ಐದಾರು ಇಂಚು ಎತ್ತರದ ಗೋಲ್ಡ್ ಕಲರ್ ಚಪ್ಪಲಿ….ಇದನ್ನೆಲ್ಲ ದರ್ಶನ್ ಸದಾ ಹಾಕಿರಲೇ ಬೇಕು. ಒಟ್ಟು 40 ಕೆಜಿ ತೂಕ ತಲೆ ಮೇಲಿನ ಕಿರೀಟ, ಕಾಸ್ಟ್ಯೂಮ್ ಎಲ್ಲವೂ ಸೇರಿ ಬರೋಬ್ಬರಿ 35 ರಿಂದ 40 ಕೆಜಿ ಭಾರವನ್ನ ದರ್ಶನ್ ಅವರು ಹೊರುತ್ತಿದ್ದಾರೆ.ಹೀಗೆ ದರ್ಶನ್ ಮೇಕಪ್ ಮುಗಿಸಿದ ನಂತರ ಬೆಳಿಗ್ಗೆ 11 ಗಂಟೆಯಿಂದ 6 ಗಂಟೆಯವರೆಗೂ ಚಿತ್ರೀಕರಣ ನಡೆಯುತ್ತೆ. ಅಲ್ಲಿಯವರೆಗೂ ದರ್ಶನ್ ಅವರು ಅದೇ ಗೆಟಪ್ ನಲ್ಲಿ ಇರಬೇಕು. ಹೀಗೆ ದಿನ ಕಳೆಯುತ್ತಾ ಇದ್ದಂತೆ ಕುರುಕ್ಷೇತ್ರದ ಬಗ್ಗೆ ಸಾಕಷ್ಟು ಕುತೂಹಲಗಳು ಹೆಚ್ಚಿದ್ದು, ರಭಸದಿಂದಲೇ ಚಿತ್ರದ ಚಿತ್ರೀಕರಣ ನಡೆಸುತ್ತಿದೆ ಚಿತ್ರತಂಡ..

ರಕ್ಷಾ ಕೂರ್ಗ್​ ಫಿಲ್ಮ್​ ಬ್ಯೂರೋ ಸುದ್ದಿ ಟಿವಿ…

0

Leave a Reply

Your email address will not be published. Required fields are marked *