ಕದನವಿರಾಮ ಉಲ್ಲಂಘಿಸಿದ ಪಾಕ್: ಬಿಎಸ್​ಎಫ್ ಯೋಧ ಬಲಿ

ಶ್ರೀನಗರ: ರಂಜಾನ್ ಪ್ರಯುಕ್ತ ಭಾರತ ಜಮ್ಮು ಕಾಶ್ಮೀರದಲ್ಲಿ ಸೇನಾ ಕಾರ್ಯಾರಣೆಯನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ಪಾಕಿಸ್ತಾನ ತನ್ನ ಆಟಾಟೋಪವನ್ನು ಮುಂದುವರೆಸಿದ್ದು, ಆರ್​ಎಸ್​​ ಪುರದಲ್ಲಿ ಇಂದು ಕದನ ವಿರಾಮವನ್ನು ಉಲ್ಲಂಘಿಸಿದೆ. ಪಾಕ್ ನಡೆಸಿದ ದಾಳಿಗೆ ಬಿಎಸ್​ಎಫ್ ಯೋಧ ಸೀತಾರಾಂ ಉಪಾಧ್ಯಾಯ ಬಲಿಯಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಮಡಿದ ಯೋಧನ ಪತ್ನಿ, ಸರ್ಕಾರ ಸೇನಾ ಕಾರ್ಯಾಚರಣೆ ನಡೆಯದಂತೆ ಸೂಚಿಸಿತ್ತು. ನನ್ನ ಪತಿ ಬಲಿಯಾಗಿದ್ದಾರೆ. ನನಗೆ ಪರಿಹಾರವನ್ನು ಕೊಟ್ಟಲ್ಲಿ, ನನ್ನ ಮಡಿದ ಪತಿ ಹಿಂದಿರುಗುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡಲಾಗುವುದು ಎಂದು ಬಿಎಸ್​ಎಫ್ ಐಜಿ ರಾಮ್ ಅತ್ವಾರ್ ಎಚ್ಚರಿಕೆ ನೀಡಿದ್ದಾರೆ. ಕೊಯ್ಲು ಮುಗಿದ ನಂತರ ಇಂಥ ದಾಳಿಗಳನ್ನು ಪಾಕ್ ನಡೆಸುವುದು ಸಾಮಾನ್ಯ ಸಂಗತಿ ಎಂದಿರುವ ಅವರು, ಇಂಥ ದುಷ್ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ಜಮ್ಮುವಿನ ಗಡಿಯಲ್ಲಿ ಗುಂಡಿನ ದಾಳಿ ಮುಂದುವರೆದಿದೆ ಎಂದು ಕಾಶ್ಮೀರ ಸಿಎಂ ಮೆಹಬೂಬ ಮುಫ್ತಿ ಹೇಳಿದ್ದಾರೆ. ಇದನ್ನು ಖಂಡಿಸಿರುವ ಅವರು, ಜಮ್ಮುವಿನಲ್ಲಿ ನಡೆಯುತ್ತಿರುವ ದಾಳಿ ನೋವಿನ ಮತ್ತು ಚಿಂತಾದಾಯಕ ವಿಷಯ ಎಂದಿದ್ದಾರೆ. ಭಾರತ ರಂಜಾನ್ ತಿಂಗಳಲ್ಲಿ ಶಾಂತಿ ಕಾಪಾಡಲು ಕೈಗೊಂಡಿರುವ ಕ್ರಮವನ್ನು ಪಾಕಿಸ್ತಾನ ಗೌರವಿಸುತ್ತಿಲ್ಲ ಎಂದು ಅವರು ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಶಾಂತಿ ಕುರಿತ ಪ್ರಯತ್ನಗಳಿಗೆ ಪರಸ್ಪರ ಸಹಕರಿಸಬೇಕು ಎಂದು ಕರೆ ನೀಡಿರುವ ಅವರು, ಪ್ರತಿಯೊಬ್ಬರೂ ಹಿಂಸಾಚಾರ ಶೂನ್ಯದ ಆಟ ಎನ್ನುವುದನ್ನು ಅರಿಯಬೇಕು ಎಂದು ಸಲಹೆ ನೀಡಿದ್ದಾರೆ. ಜೊತೆಗೆ, ಮಡಿದ ಕುಟುಂಬದವರಿಗೆ ಸಾಂತ್ವಾನ ಹೇಳಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *