ವಿಜಯ್ ಮಲ್ಯ ಪರಾರಿಯಾಗಲು ಸಿಬಿಐ ಜಂಟಿ ನಿರ್ದೇಶಕ ಕಾರಣ: ರಾಹುಲ್ ಗಾಂಧಿ

ದೆಹಲಿ: ವಿಜಯ್ ಮಲ್ಯ ದೇಶ ತೊರೆದು ಪರಾರಿಯಾಗಲು ಪ್ರಧಾನಿ ನರೇಂದ್ರ ಮೋದಿಯವರ ಬ್ಲೂ ಐ ಬಾಯ್ ಎಸ್.ಕೆ.ಶರ್ಮಾ ಕಾರಣ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಸಿಬಿಐ ಜಂಟಿ ನಿರ್ದೇಶಕ ಎ.ಕೆ.ಶರ್ಮಾ ಅವರು ವಿಜಯ್ ಮಲ್ಯ ಅವರಿಗೆ ನೀಡಲಾಗಿದ್ದ ಲುಕ್​​ಔಟ್ ನೊಟೀಸ್ ಅನ್ನು ದುರ್ಬಲಗೊಳಿಸಿದ್ದಾರೆ. ಮಿ. ಶರ್ಮಾ ಗುಜರಾತ್ ಕೇಡರ್​​ನ ಅಧಿಕಾರಿ ಎಂದಿರುವ ಅವರು, ನೀರವ್ ಮೋದಿ, ಮೆಹುಲ್ ಚೋಕ್ಸಿ ಪರಾರಿಗೂ ಶರ್ಮಾ ಅವರೇ ಕಾರಣ ಎಂದಿದ್ದಾರೆ. ಕಡೆಗೆ ತನಿಖೆ! ಎಂದಿರುವ ಅವರು ಆಶ್ಚರ್ಯ ಸೂಚಕ ಚಿಹ್ನೆಯನ್ನು ಇಟ್ಟಿದ್ದು, ಮೋದಿ ವಿರುದ್ಧ ಕಿಡಿಕಾರಿದ್ದಾರೆ.

0

Leave a Reply

Your email address will not be published. Required fields are marked *