ಅಕ್ರಮ ಆರೋಪ: ಸೇನಾಧಿಕಾರಿಯ ಬಂಧನ

ನವದೆಹಲಿ: ಸೇನಾ ನೇಮಕದಲ್ಲಿ ಅಕ್ರಮ ಎಸಗಿರುವ ಆರೋಪದಡಿ ಲೆ. ಕ. ರಂಗನಾಥನ್ ಸುವ್ರಮಣಿ ಮೋನಿಯವರನ್ನು ಸಿಬಿಐ ಬಂಧಿಸಿದೆ. ಅಕ್ರಮವಾಗಿ ವರ್ಗಾವಣೆ ಮತ್ತು ಭಡ್ತಿ ನೀಡಿರುವ ಆರೋಪ ಇವರ ವಿರುದ್ಧ ಎದರಾಗಿದೆ. ವೈಯಕ್ತಿಕವಾಗಿ ಅನುಚಿತವಾಗಿ ನಿರ್ಣಯ ತೆಗೆದುಕೊಂಡಿರುವ ಆರೋಪ ಕೂಡ ಇವರ ವಿರುದ್ಧ ಎದುರಾಗಿದೆ.ಕಳೆದ ಗುರುವಾರ ಸಿಬಿಐ ಈ ಅಧಿಕಾರಿ ವಿರುದ್ಧ ಎಫ್​ಐಆರ್ ದಾಖಲಿಸಿತ್ತು. ಸೆಕ್ಷನ್ 7, 8, 12, 13 (2) ಆರ್​/ಡಬ್ಲ್ಯೂ 13 (1) (ಡಿ) ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, 1988 ಮತ್ತು ಐಪಿಸಿ ಸೆಕ್ಷನ್ 120ಬಿ ಅಡಿ ದೂರು ದಾಖಲಾಗಿದೆ.

ಅಧಿಕಾರಿ ವಿರುದ್ಧ ಕ್ರಿಮಿನಲ್ ಪಿತೂರಿ, ಲಂಚಕ್ಕಾಗಿ ಬೇಡಿಕೆ ಮತ್ತು ಸ್ವೀಕಾರ ಮತ್ತು ಸಾರ್ವಜನಿಕ ಅಧಿಕಾರಿಯಾಗಿ ನೇಮಕದಲ್ಲಿ ಪ್ರಭಾವ ಬೀರಿರುವ ಆರೋಪಗಳನ್ನು ಸಿಬಿಐ ಹೊರಿಸಿದೆ. ಗೌರವ್ ಕೊಹ್ಲಿ, ಪುರುಷೋತ್ತಮ್ ಮತ್ತಿತರ ಸೇನಾಧಿಕಾರಿಗಳಿಗೆ ವರ್ಗಾವಣೆ ಮತ್ತು ಭಡ್ತಿ ವಿಷಯದಲ್ಲಿ ಸಹಕರಿಸುವುದಾಗಿ ಲೆ. ಕ. ರಂಗನಾಥನ್ ಭರವಸೆ ನೀಡಿದ್ದರು ಎನ್ನಲಾಗಿದೆ. ಇದಕ್ಕಾಗಿ ಅವರು ಲಂಚ ಸ್ವೀಕರಿಸಿರುವ ಆರೋಪ ಕೂಡ ಎದುರಾಗಿದೆ.

0

Leave a Reply

Your email address will not be published. Required fields are marked *