ಇನ್ನೊಂದೇ ವಾರದಲ್ಲಿ ಅಂತ್ಯಗೊಳ್ಳಲಿದೆ ಕಾವೇರಿ ವಿಚಾರಣೆ

ಕಾವೇರಿ ನದಿ ನೀರು ಹಂಚಿಕೆಯಲ್ಲಿ ಉಂಟಾಗಿರೋ ವಿವಾದದ ವಿಚಾರಣೆ ಮುಗಿಯುವ ಹಂತಕ್ಕೆ ತಲುಪಿದೆ. ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದ ಮುಂದೆ ನಡೆಯುತ್ತಿರೋ ಮೇಲ್ಮನವಿ ಅರ್ಜಿಗಳ ವಿಚಾರಣೆ ಮುಂದಿನ ವಾರ ಬಹುತೇಕ ಅಂತ್ಯಗೊಳ್ಳಲಿದೆ. ನಾಲ್ಕು ರಾಜ್ಯಗಳು ವಾದ ಮುಗಿಸಿದ್ದು ಪ್ರತಿವಾದಕ್ಕೆ ತಯಾರಿ ನಡೆಸಿವೆ.ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಸುಪ್ರೀಂಕೋರ್ಟ್ ನಲ್ಲಿ ನಡೆಯುತ್ತಿರೋ ವಿಚಾರಣೆ ಅಂತಿಮ ಹಂತಕ್ಕೆ ತಲುಪಿದೆ. ಎರಡು ತಿಂಗಳುಗಳಿಂದ ನಡೆದ ವಿಚಾರಣೆಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಪುದುಚೆರಿ ರಾಜ್ಯಗಳು ವಾದ ಮಂಡಿಸಿವೆ. ನ್ಯಾಯಾಧೀಕರಣದ ಐ-ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿದ್ದು, ಸ್ವಾತಂತ್ರ್ಯ ಪೂರ್ವದ ಒಪ್ಪಂದಗಳ ಅಮಾನ್ಯತೆ, ಕರ್ನಾಟಕ ನೀರಾವರಿ ಭೂಮಿ ಹೆಚ್ಚಳ, ಸಂಪೂರ್ಣ ಬೆಂಗಳೂರಿಗೆ ಕುಡಿಯುವ ನೀರಿಗೆ ಸುಪ್ರೀಂಕೋರ್ಟ್ ಮುಂದೆ ಕರ್ನಾಟಕ ಪ್ರತಿಪಾದಿಸಿದೆ.

ಹಳೇ ಒಪ್ಪಂದಗಳು ಕರ್ನಾಟಕದ ಒಪ್ಪಿಗೆ ಮೇರೆಗೆ ನಡೆದಿದ್ದು, ಒಪ್ಪಂದಗಳ ಲಾಭವನ್ನು ಕರ್ನಾಟಕ ಅನುಭವಿಸಿದೆ. ಹಾಗಾಗಿ ಒಪ್ಪಂದಗಳ ಅನ್ವಯವೇ ನೀರು ಹಂಚಿಕೆಯಾಗಬೇಕು. ಅಲ್ಲದೇ ಕರ್ನಾಟಕದ ವ್ಯವಸಾಯ ಭೂಮಿ. ಅದು ಭತ್ತ, ಕಬ್ಬಿಗೆ ಯೋಗ್ಯವಾಗಿಲ್ಲ. ಹಿಂದೆ ಅನುಸರಿಸುತ್ತಿದ್ದ ಒಣ ಬೇಸಾಯ ಪದ್ದತಿಯನ್ನು ಕರ್ನಾಟಕ ಅಳವಡಿಸಿಕೊಳ್ಳಬೇಕು.ಅಂತಾ ತಮಿಳುನಾಡು ಒಪ್ಪಂದಗಳ ಮಾನ್ಯತೆ ಬಗ್ಗೆ ಪ್ರತಿಪಾದಿಸಿ ತನ್ನ ವಾದವನ್ನು ಅಂತ್ಯಗೊಳಿಸಿದೆ.

ನಾಲ್ಕು ರಾಜ್ಯಗಳು ವಾದ ಮುಗಿಸಿದ್ದು ಪ್ರತಿವಾದಕ್ಕೆ ತಯಾರಿ ನಡೆಸಿವೆ. ಇಂದು ಕರ್ನಾಟಕದ ಪರವಾಗಿ ನಾರಿಮನ್ ಪ್ರತಿವಾದ ಮಂಡಿಸಲಿದ್ದಾರೆ. ನಾರಿಮನ್ ಪ್ರತಿವಾದದ ಬಳಿಕ ಕೇರಳ, ಪುದುಚೆರಿ, ತಮಿಳುನಾಡಿಗೂ ಪ್ರತಿವಾದಕ್ಕೆ ಪೀಠ ಅವಕಾಶ ನೀಡಿದೆ. ಇನ್ನು ಕಾವೇರಿ ನೀರು ಹಂಚಿಕೆಯಲ್ಲಿ ಕೇಂದ್ರ ಸರಕಾರದ ಪಾತ್ರವೂ ಮುಖ್ಯವಾಗಿದ್ದು, ಕಾವೇರಿ ನದಿ ನಿರ್ವಹಣಾ ಮಂಡಳಿ ರಚನೆ ಬಗ್ಗೆ ತನ್ನ ನಿಲುವನ್ನು ಸುಪ್ರೀಕೋರ್ಟ್ ಗೆ ತಿಳಿಸಲಿದೆ. ಕೊನೆಯದಾಗಿ ಜಲತಜ್ಞರ ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ಸಂಗ್ರಹಿಲಿದ್ದು, ಮುಂದಿನ ವಾರವೇ ವಿಚಾರಣೆಗೆ ಅಂತ್ಯಹಾಡಿ ತೀರ್ಪು ಕಾದಿರಿಸಲಿದೆ.

ಹರೀಶ್ , ಸುದ್ದಿಟಿವಿ

0

Leave a Reply

Your email address will not be published. Required fields are marked *