ದನಕರುಗಳ ಮಾರಾಟ ಕುರಿತ ಪಿಐಎಲ್​: ಜೂ. 15ರಂದು ವಿಚಾರಣೆ

ನವದೆಹಲಿ: ದನಕರುಗಳ ಮಾರಾಟ, ಸಾಗಾಟ, ಸಾಕುವಿಕೆ ಮತ್ತು ಹತ್ಯೆ ಕುರಿತು ಕೇಂದ್ರ ಸರ್ಕಾರ ರೂಪಿಸಿರುವ ನೂತನ ನಿಯಮಗಳ ವಿರುದ್ಧ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಜೂನ್ 15ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ. ಹೈದರಾಬಾದ್ ಮೂಲದ ಸಂಘಟನೆಯೊಂದು ಕೇಂದ್ರ ಸರ್ಕಾರದ ವಿರುದ್ಧ ಅರ್ಜಿ ಸಲ್ಲಿಸಿದೆ.

ಕೇಂದ್ರ ಸರ್ಕಾರದ ನೂತನ ಅಧಿಸೂಚನೆಯ ಪ್ರಕಾರ, ಎತ್ತು, ಹಸು, ಎಮ್ಮೆ, ಒಂಟೆ ಮತ್ತು ಕರುಗಳನ್ನು ಸಾಕಲು, ಮಾರಲು ಮತ್ತು ಮಾಂಸಕ್ಕಾಗಿ ಹತ್ಯೆಗೈಯಲು ಕಠಿಣ ಕ್ರಮಗಳನ್ನು ಅನುಸರಿಸಬೇಕಿದೆ. ಅಧಿಸೂಚನೆಯ ಪ್ರಕಾರ ಹೊರರಾಜ್ಯದ ವ್ಯಕ್ತಿಗಳಿಗೆ ಹಸು ಮಾರಾಟ ಮಾಡಲು ಕೂಡ ನಿರ್ಬಂಧ ವಿಧಿಸಲಾಗಿದೆ. ಈ ನಿಯಮಗಳ ವಿರುದ್ಧ ದೇಶದಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

0

Leave a Reply

Your email address will not be published. Required fields are marked *