ಬುಲೆಟ್​ ರೈಲು ಯೋಜನೆಗೆ ಚಾಲನೆ

ಭಾರತದ ಮೊಟ್ಟಮೊದಲ ಬುಲೆಟ್ ರೈಲು ಯೋಜನೆಗೆ ಇಂದು ಚಾಲನೆ ಸಿಕ್ಕಿದೆ.. ಅಹಮದಾಬಾದ್​ನ ಅಥ್ಲೆಟಿಕ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ಬುಲೆಟ್ ರೈಲು ಯೋಜನೆಗೆ ಚಾಲನೆ ನೀಡಿದರು. ಉಭಯ ನಾಯಕರು ಸ್ವಿಚ್ ಪ್ರೆಸ್ ಮಾಡುವ ಮೂಲಕ ಶಂಕುಸ್ಥಾಪನೆ ಮಾಡಿದರು.ಬಳಿಕ ಉಭಯ ನಾಯಕರಿಗೆ ಅಧಿಕಾರಿಗಳು ಬುಲೆಟ್ ರೈಲಿನ ಹಳಿ ಮಾರ್ಗದ ಮಾದರಿಯ ಮೂಲಕ ಯೋಜನೆಯ ಕುರಿತು ಮಾಹಿತಿ ನೀಡಿದರು.ಗುಜರಾತ್ ನ ಅಹ್ಮದಾಬಾದ್ ನಿಂದ ಮುಂಬೈಗೆ ಪ್ರಪ್ರಥಮ ಬುಲೆಟ್ ರೈಲು ಸಂಚಾರ ಮಾಡಲಿದ್ದು,ಸುಮಾರು 509 ಕಿ.ಮೀ ದೂರವನ್ನು ರೈಲು ಕೇವಲ 2.58 ಗಂಟೆಗಳಲ್ಲಿ ತಲುಪಲಿದೆ. ಇನ್ನು ಶಂಕುಸ್ಥಾಪನೆ ಬಳಿಕ ನಮಸ್ಕಾರ ಎಂದು ಹಿಂದಿಯಲ್ಲೇ ಭಾಷಣ ಆರಂಭಿಸಿದ ಜಪಾನ್ ಪ್ರಧಾನಿ ಶಿಂಜೋ ಅಬೆ, ಭಾರತ ಜಪಾನ್ ದೇಶಕ್ಕೆ ಉಜ್ವಲ ಭವಿಷ್ಯವಿದೆ ಅಂತಾ ಹೇಳಿದ್ರು..

0

Leave a Reply

Your email address will not be published. Required fields are marked *