ವೈಭವದ ರಾಮಮಂದಿರ ನಿರ್ಮಿಸಿ: ಬಾಬಾ ರಾಂದೇವ್

ಲಖ್ನೋ: ಲೋಕಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳೂ ಭರದಿಂದ ಪಕ್ಷ ಮತ್ತು ಕಾರ್ಯಕರ್ತರನ್ನು ಸಜ್ಜುಗೊಳಿಸುತ್ತಿದ್ದು, ಈ ನಡುವೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರ ಪದೇಪದೇ ಪ್ರಸ್ತಾಪವಾಗತೊಡಗಿದೆ. ಮಂದಿರ ನಿರ್ಮಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡಗಳು ಕೂಡ ಹೆಚ್ಚತೊಡಗಿವೆ. ಯೋಗಗುರು ಬಾಬಾ ರಾಂ​ದೇವ್ ಈಗ ಅಖಾಡಕ್ಕೆ ಇಳಿದಿದ್ದು, ರಾಮಮಂದಿರ ನಿರ್ಮಿಸುವಂತೆ ಒತ್ತಡ ಹೇರಿದ್ದಾರೆ.

ಪ್ರಧಾನಿ ನರೇಂದ್ರ  ಮೋದಿಯವರನ್ನು ರಾಮಭಕ್ತ ಮತ್ತು ರಾಷ್ಟ್ರಭಕ್ತ ಎಂದು ಹೊಗಳಿರುವ ಅವರು, ದೇಶ ಅಯೋಧ್ಯೆಯಲ್ಲಿ ವೈಭವದ ರಾಮಮಂದಿರ ನಿರ್ಮಾಣವನ್ನು ಬಯಸುತ್ತಿದೆ ಎಂದರು. ಶೀಘ್ರದಲ್ಲೇ ರಾಮ ಮಂದಿರ ನಿರ್ಮಾಣವಾಗಬೇಕು. ಅದಕ್ಕಾಗಿ ಸಂಸತ್ತಿನಲ್ಲಿ ಕಾನೂನು ಜಾರಿಗೊಳಿಸಬೇಕು ಜನ ಕೇಂದ್ರವನ್ನು ಒತ್ತಾಯಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜೊತೆಗೆ, ರಾಮಮಂದಿರ ನಿರ್ಮಾಣಕ್ಕೆ ಹಿಂದೂಗಳಾಗಲೀ, ಮುಸ್ಲಿಮರಾಗಲೀ ವಿರೋಧಿಸುವುದಿಲ್ಲ ಎಂದು ಕೂಡ ಹೇಳಿದರು. ರಾಜಕೀಯ ಪಕ್ಷಗಳು ಅನೇಕ ಕಾರಣಗಳಿಗಾಗಿ ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ ರಾಮನ ವಿಚಾರದಲ್ಲಿ ಯಾರೂ ವಿರೋಧ ವ್ಯಕ್ತಪಡಿಸುವ ಧೈರ್ಯ ಮಾಡಲಾರರು ಎಂದ ಅವರು, ಮೂಲ ಸ್ಥಳದಲ್ಲೇ ಮಂದಿರ ನಿರ್ಮಿಸಲು ಸಂಸತ್ತೇ ನಿರ್ಣಯ ತೆಗೆದುಕೊಳ್ಳಬೇಕು ಎಂದರು.

0

Leave a Reply

Your email address will not be published. Required fields are marked *