ಪಾಕ್ ಪ್ರೇರಿತ ಭಯೋತ್ಪಾದನೆ ಅಂತ್ಯಗೊಳಿಸಲಾಗುವುದು: ಗೃಹ ಸಚಿವ

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಅಸ್ತಿತ್ವದಲ್ಲಿರುವ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯನ್ನು ನಾವು ಕೊನೆಗೊಳಿಸುತ್ತೇವೆ ಮತ್ತು ರಾಜ್ಯದಲ್ಲಿ ಶಾಂತಿ ಸ್ಥಾಪಿಸುತ್ತೇವೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ. ಅಲ್ಲದೇ, ಭಾರತೀಯ ಸೇನೆ ಪಾಕ್ ವಿರುದ್ಧ ನಡೆಸಿದ ನಿರ್ದಿಷ್ಟ ದಾಳಿಯ ನಂತರ ಜಮ್ಮು ಕಾಶ್ಮೀರದಲ್ಲಿ ಅಕ್ರಮ ನುಸುಳುವಿಕೆಯ ಪ್ರಮಾಣದಲ್ಲಿ ಶೇ. 45ರಷ್ಟು ಇಳಿಕೆಯಾಗಿದೆ ಎಂದರು.

ಐಸಿಸ್ ಒಡ್ಡಿದ ಸವಾಲುಗಳನ್ನು ನಾವು ಸಮರ್ಥವಾಗಿ ನಿರ್ವಹಿಸಿದ್ದೇವೆ. ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ ಮತ್ತು ಸರ್ಕಾರ ದೇಶದ ಆಂತರಿಕ ಭದ್ರತೆ ಕಾಯ್ದುಕೊಂಡಿದೆ. ಮತ್ತು ಭಯೋತ್ಪಾದಕರ ದಾಳಿಗಳನ್ನು ನಿಯಂತ್ರಿಸುವಲ್ಲಿ ಸಫಲವಾಗಿದೆ ಎಂದರು.ಎನ್​ಡಿಎ ಸರ್ಕಾರದ ಮೂರನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ದೆಹಲಿಯಲ್ಲಿ ಸುದ್ದಿ ಗೋಷ್ಠಿ ನಡೆಸಿದ ಗೃಹ ಸಚಿವ ರಾಜನಾಥ್ ಸಿಂಗ್, ದೇಶದಲ್ಲಿ ಐಸಿಸ್​ ಉಗ್ರ ಸಂಘಟನೆಗೆ ಪಾರಮ್ಯ ಸಾಧಿಸಲು ಅವಕಾಶ ನೀಡಿಲ್ಲ ಎಂದು ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಕಾಶ್ಮೀರದ ಪರಿಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ. ಮುಸ್ಲಿಂರ ಸಂಖ್ಯಾ ಪ್ರಾಬಲ್ಯವಿರುವ ಕಾಶ್ಮೀರದಲ್ಲಿ ಕೂಡ ಪರಿಸ್ಥಿತಿಯನ್ನು ತಹಬಂದಿಗೆ ತರಲಾಗಿದೆ ಎಂದು ಅವರು ಹೊಸ ವಿವಾದಾಸ್ಪದ ಹೇಳಿಕೆಯನ್ನೂ ನೀಡಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ 2014ರಿಂದ 368 ಭಯೋತ್ಪಾದರನ್ನು ಹತ್ಯೆಗೈದಿದೆ ಎಂದರು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *