ಪೀಣ್ಯಾದಲ್ಲೂ ಮೆಜೆಸ್ಟಿಕ್ ಮಾಧರಿಯ ಬಿಎಂಟಿಸಿ ಸೇವೆ..!

ಬೆಂಗಳೂರು: ಇಲ್ಲಿನ ಸಂಚಾರಿ ಹೃದಯ ಭಾಗ ಅಂದ್ರೆ ಅದು ಮೆಜೆಸ್ಟಿಕ್, ರಾಜ್ಯದ ಯಾವ ಮೂಲೆಯಿಂದ ಬೆಂಗಳೂರಿಗೆ ಬಸ್ ಏರಿದ್ರೂ ಅವರು ಮೆಜೆಸ್ಟಿಕ್ ದರ್ಶನ ಮಾಡಿಯೇ ಬೇರೆಕಡೆಗೆ ತೆರಳಬೇಕು. ಹೀಗಾಗೇ ಮೆಜೆಸ್ಟಿಕ್ ನಲ್ಲಿ ಯಾವಾಗ್ಲೂ ಟ್ರಾಫಿಕ್.. ಟ್ರಾಫಿಕ್.. ಇದನ್ನ ತಪ್ಪಿಸಲೆಂದೇ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬದಲಾಗಿ ಪೀಣ್ಯಾದಲ್ಲೊಂದು ಕೆಎಸ್​​​ಆರ್​​ಟಿಸಿ ಬಸ್ ನಿಲ್ದಾಣ ರೂಪಿಸಲಾಯ್ತು. ರಾಜ್ಯದ ಮೂಲೆ ಮೂಲೆಗೆ ತೆರಳೋ ಅರ್ಧದಷ್ಟು ಬಸ್​​ಗಳನ್ನ ಪೀಣ್ಯಾದಿಂದಲೇ ಓಡಿಸ್ಬೇಕು ಅನ್ನೋದು ಈ ನಿಲ್ದಾಣ ನಿರ್ಮಾಣದ ಹಿಂದಿನ ಯೋಜನೆ ಆಗಿತ್ತು. ಆದರೆ ಅದು ವರ್ಕೌಟ್ ಆಗದೆ ಪೀಣ್ಯಾ ನಿಲ್ದಾಣ ಈಗ ಖಾಲಿಯಾಗಿ ನಿಂತಿದೆ. ಈಗ ಇದನ್ನ ಸರಿಪಡಿಸೋಕೆ ಕೆಸ್​ಆರ್​​ಟಿಸಿ ಹೊಸ ಯೋಜನೆ ಮಾಡಿದೆ.

ಮತ್ತೆ ಉತ್ತರ ಕರ್ನಾಟಕ ಭಾಗಕ್ಕೆ ಪೀಣ್ಯಾದಿಂದಲೇ ಬಸ್ ಸಂಚಾರ ಆರಂಭಿಸಲು ಕೆಸ್​ಆರ್​​ಟಿಸಿ ತೀರ್ಮಾನಿಸಿದೆ. ಚಿತ್ರದುರ್ಗ, ದಾವಣಗೆರೆ, ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ, ಗದಗ, ಧಾರವಾಡ, ಬೆಳಗಾವಿ ಸೇರಿದಂತೆ ಸಂಪೂರ್ಣ ಉತ್ತರ ಕರ್ನಾಟಕ ಭಾಗಕ್ಕೆ ಸಂಚರಿಸೋ ಕೆಸ್​ಆರ್​​ಟಿಸಿ ಬಸ್ ಗಳನ್ನು ಮತ್ತೆ ಪೀಣ್ಯಾಗೆ ಶಿಫ್ಟ್ ಮಾಡಲು ಕೆಸ್​ಆರ್​​ಟಿಸಿ ತೀರ್ಮಾನಿಸಿದೆ. ಇಲ್ಲಿಂದ ಸಿಟಿಗೆ ಸಂಪರ್ಕ ಕಲ್ಪಿಸೋ ನಿಟ್ಟಿನಲ್ಲಿ ಈಗ ಮೆಜೆಸ್ಟಿಕ್ ನಲ್ಲಿರುವಂತೆ ಬಿಎಂಟಿಸಿ ಬಸ್ ನಿಲ್ದಾಣವನ್ನ ಪೀಣ್ಯಾದಲ್ಲೂ ಮಾಡಿ ಅಲ್ಲಿಂದ ನಗರದ ವಿವಿದೆಡೆಗೆ ಸಂಪರ್ಕ ಕಲ್ಪಿಸಲು ತೀರ್ಮಾನಿಸಲಾಗಿದೆ.

ಇನ್ನು ಈಗಾಗಲೇ ಈ ಕುರಿತಾಗಿ ಬಿಎಂಟಿಸಿಯೊಂದಿಗೂ ಕೆಸ್​ಆರ್​​ಟಿಸಿ ಚರ್ಚೆ ನಡೆಸಿದೆ. ಒಂದುವೇಳೆ ಪೀಣ್ಯಾದಿಂದ ಕೆಸ್​ಆರ್​​ಟಿಸಿ ಬಸ್ ಸಂಚಾರ ಆರಂಭವಾದರೆ ಇದಕ್ಕೆ ಸಹಕಾರ ನೀಡೋದಾಗಿ ಬಿಎಂಟಿಸಿಯೂ ತಿಳಿಸಿದೆ. ಮೆಜೆಸ್ಟಿಕ್ ನಿಂದ ಹೇಗೆ ಬಿಎಂಟಿಸಿ ವ್ಯವಸ್ಥೆ ಇದಿಯೋ ಅದೇ ರೀತಿ ಪೀಣ್ಯಾದಲ್ಲೂ ನೀಡಲು ಬಿಎಂಟಿಸಿ ಉತ್ಸಾಹ ತೋರಿಸಿದೆ. ಒಟ್ಟಿನಲ್ಲಿ ಪೀಣ್ಯಾದಲ್ಲಿ ಬಸ್ ನಿಲ್ದಾಣ ಕಟ್ಟಿದ್ರೆ ಸಾಕು ಸಿಟಿ ಟ್ರಾಫಿಕ್ ಕಡಿಮೆ ಆಗುತ್ತೆ ಅನ್ನೋ ವಿಶ್ವಾಸದಲ್ಲಿದ್ದ ಕೆಸ್​ಆರ್​​ಟಿಸಿಗೆ, ಈಗ ಕೇವಲ ಬಸ್ ನಿಲ್ದಾಣ ಕಟ್ಟಿದ್ರೆ ಸಾಲದು ಅದಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸಬೇಕು ಅನ್ನೋದು ಅರಿವಾಗಿದೆ. ಮುಂದಿನ ದಿನಗಳಲ್ಲಿ ಕೆಸ್​ಆರ್​​ಟಿಸಿಯ ಈ ಹೊಸ ಯೋಜನೆಯನ್ನ ಜನ ಒಪ್ಪಿಕೊಳ್ತಾರೋ ಇಲ್ವೋ ಅನ್ನೋದನ್ನ ಕಾದು ನೋಡಬೇಕಿದೆ.

ಮಂಜುನಾಥ್ ಹೊಸಹಳ್ಳಿ ಸುದ್ದಿಟಿವಿ ಬೆಂಗಳೂರು.

1+

Leave a Reply

Your email address will not be published. Required fields are marked *