ಬಿಎಮ್​ಟಿಸಿ ಅಧ್ಯಕ್ಷ ನಾಗರಾಜ್ ಯಾದವ್ ಡಿಪೋಗಳಿಗೆ ಧಿಡೀರ್ ಭೇಟಿ

ಸಿಎಂ ಸಿದ್ದರಾಮಯ್ಯ ನಗರದ ಪ್ರದಕ್ಷಿಣೆ ವೇಳೆ ಎರಡು ವೊಲ್ವೊ ಬಸ್​ ಕೈ ಕೊಟ್ಟ ಹಿನ್ನಲೆಯಲ್ಲಿ ನಿನ್ನೆ ತಡರಾತ್ರಿ ಬಿಎಮ್​ಟಿಸಿ ಅಧ್ಯಕ್ಷ ನಾಗರಾಜ್ ಯಾದವ್ ಡಿಪೋಗಳಿಗೆ ಧಿಡೀರ್ ಭೇಟಿ ನೀಡಿದ್ರು..ಸಿ ಎಂ ಸಿದ್ದರಾಮಯ್ಯ ಸಂಚರಿಸುವಾಗ ಮೊದಲ ವೊಲ್ವೊ ಬಸ್​​ನಲ್ಲಿ ಎಸಿ ಕಡಿಮೆ ಇದ್ದ ಹಿನ್ನಲೆಯಲ್ಲಿ ಮೊದಲ ಬಸ್ ಚೆಂಜ್ ಮಾಡಲಾಗಿತ್ತು..ನಂತ್ರ ಸಿಎಂ ಸಂಚರಿಸೊ ಬಸ್​ನ ಡ್ರೈವರ್ ವರ್ಕಶಾಪ್​ಗೆ ಬಂದಿದ್ದ ಬಸ್​ ತೆಗೆದುಕೊಂಡ ಬಂದ ಹಿನ್ನಲೆಯಲ್ಲಿ ಎರಡನೆ ಬಸ್ ಕೂಡ ಕೈ ಕೊಟ್ಟಿತ್ತು..ಸಿಎಂ ಸಂಚರಿಸುವಾಗ ಬಸ್​​ ಕೈ ಕೊಟ್ಟ ಹಿನ್ನಲೆಯಲ್ಲಿ ಬಿಎಮ್ ಟಿ ಸಿ ಅಧ್ಯಕ್ಷ ನಾಗರಾಜ್ ಯಾದವ್ ಕ್ಷಮೆ ಕೇಳಿದ್ದಾರೆ..ಅಲ್ಲದೆ ಬಸ್ ಕೈ ಕೊಟ್ಟು ನಿಂತ ಹಿನ್ನಲೆಯಲ್ಲಿ ಕರ್ತವ್ಯ ಲೋಫ ಎಸಗಿದವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಬಿಎಮ್​ಟಿಸಿ ನಿರ್ದೇಶಕರಿಗೆ ಸೂಚನೆ ನೀಡಿಲಾಗಿದೆ…ವೊಲ್ವೊ ಬಸ್​ ಕೈ ಕೊಟ್ಟ ಹಿನ್ನಲೆಯಲ್ಲಿ ಶಾಂತಿನಗರ ಬಸ್ ಡಿಪೋ , ಕೆ ಆರ್ ಪುರಂ 24 ಮತ್ತು 29 ಡಿಪೋ ಸೇರಿದಂತೆ ಮೇಜೆಸ್ಟಿಕ್​ ನಲ್ಲಿರುವ ಬಿಎಮ್ ಟಿಸಿ ಡಿಪೋ ನಂಬರ್ 7 ಕ್ಕು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು..ರಾತ್ರಿ ಪಾಳಿಯಲ್ಲಿ ಡಿಪೋದಲ್ಲಿ ಕೆಲಸ ಮಾಡೋ ಮೆಕ್ಯಾನಿಕ್​ ಗಳಿಗೆ ಬಸ್​​ ಕಳುಹಿಸಿವ ಮುನ್ನ ಒಂದು ಬಾರಿ ಸರಿಯಾಗಿ ಚೆಕ್ ಮಾಡಿ ಕಳುಹಿಸುವಂತೆ ಸೂಚನೆ ನೀಡಿದ್ರು..ಅಲ್ಲದೆ ನಡು ರಸ್ತೆಯಲ್ಲಿ ನಿಲ್ಲುವಂತಹ ಬಸ್​ಗಳನ್ನು ಯಾವುದೆ ಕಾರಣಕ್ಕು ರಸ್ತೆಗೆ ಬಿಡಿದಂತೆ ಕೂಡ ಸೂಚನೆ ನೀಡಿದ್ದಾರೆ..

0

Leave a Reply

Your email address will not be published. Required fields are marked *