ಬಿಜೆಪಿ ಪ್ರಜಾಪ್ರಭುತ್ವ ಮತ್ತು ಆಡಳಿತವನ್ನೂ ಖಾಸಗೀಕರಿಸುತ್ತದೆ: ಸಿದ್ದರಾಮಯ್ಯ

ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ಆಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟರ್​​ ಮೂಲಕ ಆರೋಪಿಸಿದ್ದಾರೆ. ತಮ್ಮ ಖಾತೆಯಲ್ಲಿ ಈ ಕುರಿತು ಬರೆದಿರುವ ಅವರು, ರಫೇಲ್ ಒಪ್ಪಂದ ದಿನಕಳೆದಂತೆ ನೈತಿಕಪ್ರಶ್ನೆಗಳನ್ನು ಎತ್ತುತ್ತಿದೆ. ಫ್ರಾನ್ಸ್​​ನ ಸಾರ್ವಭೌಮತೆಯನ್ನು ಉಲ್ಲಂಘಿಸಿ, ಹೆಚ್ಚಿನ ಮೊತ್ತಕ್ಕೆ ಯುದ್ಧ ವಿಮಾನಗಳನ್ನು ಖರೀದಿಸಿ, ಸ್ವಜನ ಪಕ್ಷಪಾತ ಮಾಡುವ ಮೂಲಕ ರಕ್ಷಣಾ ಹೊಣೆಗಾರಿಕೆಯನ್ನು ಆಪ್ತ ಸ್ನೇಹಿತರಿಗೆ ನೀಡಲಾಗಿದೆ ಎಂದು ಆರೋಪಿಸಿರುವ ಅವರು, ಮುಂದೇನು ಎಂದು ಪ್ರಶ್ನಸಿದ್ದಾರೆ. ಜೊತೆಗೆ ಬಿಜೆಪಿ ಪ್ರಜಾಪ್ರಭುತ್ವ ಮತ್ತು ಆಡಳಿತವನ್ನೂ ಖಾಸಗೀಕರಿಸಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. #BikGayaChowkidar ಹ್ಯಾಷ್​ಟ್ಯಾಗ್​ನಡಿ ಟ್ವೀಟ್ ಮಾಡಿದ್ದು, ಬಿಜೆಪಿ ಪಕ್ಷಕ್ಕೆ ಟ್ಯಾಗ್ ಮಾಡಿದ್ದಾರೆ.

0

Leave a Reply

Your email address will not be published. Required fields are marked *