ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಅಖಾಡ ಸಜ್ಜುಗೊಂಡ ಬೆನ್ನಲ್ಲೇ, ಇತ್ತ ಪಾಳಯ ಕೂಡ ತನ್ನ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆಗೆ ಮುಂದಾಗಿದೆ. ಈಗಾಗಲೆ 72 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸರುವ ಬಿಜೆಪಿ, ಇಂದು ಉಳಿದ ಎಲ್ಲಾ ಕ್ಷೇತ್ರಗಳಿಗೆ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇಂದು ಸಂಜೆ 6ಕ್ಕೆ ಅಮಿತ್ ಶಾ ನೇತೃತ್ವದಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಸಭೆಯಲ್ಲಿ ಚರ್ಚೆಯ ಬಳಿಕ 2ನೇ ಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ಮೊದಲನೇ ಪಟ್ಟಿ ಪ್ರಕಟಿಸಿರುವ ಬಿಜೆಪಿಗೆ ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಭಿನ್ನಮತ ತಟ್ಟಿದೆ. ಬಂಡಾಯದ ಕಾವು ಇನ್ನೂ ಶಮನವಾಗಿಲ್ಲ. ಇದರ ನಡುವೆಯೇ 2ನೇ ಪಟ್ಟಿ ಬಿಡುಗಡೆ ಮಾಡುತ್ತಿರುವುದು ಯಾವ ರೀತಿಯ ಬಿಕ್ಕಟ್ಟಿಗೆ ಕಾರಣವಾಗಲಿದೆ ಕಾದುನೋಡಬೇಕಿದೆ..