ಜ್ಞಾನಭಾರತಿ ಆವರಣದಲ್ಲಿ ಪಕ್ಷಿಗಳು ಹಾಗೂ ನವಿಲಿನ ಸಂಖ್ಯೆ ಹೆಚ್ಚಳವಾಗಿದೆ…..

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಪಕ್ಷಿಗಳು ಹಾಗೂ ನವಿಲಿನ ಸಂಖ್ಯೆ ಹೆಚ್ಚಳವಾಗಿದೆ. ಇದು ಪಕ್ಷಿಪ್ರಿಯರಿಗೆ ಸಂತಸ ವಿಚಾರವಾದ್ರೆ. ಪ್ರಕೃತಿ ಸಮತೋನ ಕಾಯ್ದುಕೊಳ್ಳುವ ವಿಚಾರದಲ್ಲೂ ಉತ್ತಮ ಬೆಳವಣಿಗೆ.. ಮುಂಗಾರು ಆರಂಭಗೊಂಡಿರೋ ಈ ಹೊತ್ತಿನಲ್ಲಿ, ಬೆಂಗಳೂರು ವಿಶ್ವವಿದ್ಯಾಲಯದ ಬಯೋ ಪಾರ್ಕ್​ನಲ್ಲಿ ಹಕ್ಕಿಗಳ ಕಲರವವೂ ಜೋರಾಗಿದೆ.. ವಿವಿ 1100 ಎಕರೆ ಪ್ರದೇಶದ ವಿಶಾಲವಾದ ಕ್ಯಾಂಪಸ್​ ಹೊಂದಿದೆ. ಅದ್ರಲ್ಲಿ 840 ಎಕರೆ ಪ್ರದೇಶದಲ್ಲಿ ಜೀವ ವೈವಿಧ್ಯತೆಯ ಸಣ್ಣ ಕಾಡೊಂದು ತಲೆ ಎತ್ತಿರೋ ಕಾರಣ ಇದು ಹಕ್ಕಿಗಳ ಅವಾಸ ಸ್ಥಾನ ಆಗ್ತಿದೆ.. ಜೊತೆಗೆ ಸೌಂದರ್ಯಕ್ಕೆ ಹೆಸರಾದ ನವಿಲುಗಳ ಸಂತಾನವೂ ಹೆಚ್ಚಿದೆ.

 ಜೀವವೈವಿಧ್ಯತೆಯ ಈ ಕಾಡಿನಲ್ಲಿ ನಿತ್ಯ ಹರಿದ್ವರ್ಣದ ಕಾಡಿನ ಮರಗಳಿವೆ. ಈ ಹಸಿರು ಬನದಲ್ಲಿ ಹಕ್ಕಿಗಳ ಕಲವರವ, ಚಿಟ್ಟೆಗಳ ಹಾರಾಟ ನೋಡೋದು ಕಣ್ಣಿಗೆ ಹಬ್ಬ. ಇವುಗಳಿಗೆ ಆಹಾರವನ್ನ ಒದಗಿಸಲು ಗಿಡಿಗಂಟೆಗಳ ನಡುವೆ ಕೀಟ ಪ್ರಪಂಚವಿಲ್ಲಿದೆ. ಒಟ್ಟಾರೆ ಇಲ್ಲಿ 67 ಬಗೆಯ ಚಿಟ್ಟೆಗಳು, 74 ಬಗೆಯ ವಿಭಿನ್ನ ಪಕ್ಷಿ ಸಂಕುಲ, 4 ಲಕ್ಷಕ್ಕೂ ವೈವಿಧ್ಯಮಯ ಸಸ್ಯ ಸಂಕುಲ, ತೊರೆ ಇದೆ. ಈ ಪೂರಕ ವಾತಾವರಣದಲ್ಲಿ ಕಳೆದ ಮೂರು ವರ್ಷದ ಹಿಂದೆ 3 ಇದ್ದ ನವಿಲು ತಮ್ಮ ಸಂಖ್ಯೆಯನ್ನ 200ಕ್ಕೆ ಹೆಚ್ಚಿಸಿ ಕೊಂಡಿವೆ ಅಂತಾರೆ ಪರಿಸರ ವಿಭಾಗದ ಡಾ. ನಂದಿನಿ.

ಇಲ್ಲಿನ ಹಕ್ಕಿಗಳಿಗೆ ಹಣ್ಣನ್ನ ಒದಗಿಸಲು ಹಲವು ಕಾಡು ಮರಗಳಿವೆ. ಜೊತೆಗೆ ವಾಸಿಸಲು ಯೋಗ್ಯವಾದ ಸ್ಥಳವಿದು. ಇಲ್ಲಿ ನಗರ ಪ್ರದೇಶದ ಗಲಾಟೆಯಿಲ್ಲ. ವಿಕಿರಣ ಸೂಸುವ ಮೊಬೈಲ್​ ಟವರ್​ಗಳಿಲ್ಲ. ಹಕ್ಕಿಗಳಿಗೆ ಸಿಗುವ ಹಣ್ಣು ಅಥವಾ ಬೀಜಗಳಿಗೆ ಯಾವುದೇ ರಾಸಾಯನಿಕದ ಸಿಂಪಡಣೆಯಿಲ್ಲದೆ. ಹಾಗಾಗಿ ಪಕ್ಷಿ ಸಂಕುಲ ಸುರಕ್ಷಿತ ಪ್ರದೇಶ ಅಂತ ಭಾವಿಸಿವೆ.ಈ ಕಾಡಿನಲ್ಲಿ ನಗರ ಪ್ರದೇಶಕ್ಕಿಂತ ಶೇಕಡಾ 2 ಡಿಗ್ರಿಯಷ್ಟು ತಾಪಮಾನ ಕಡಿಮೆಯಿರುತ್ತೆ. ಆದ್ರೆ, ಒಂದು ಕೊಳದಲ್ಲಿ ವಿವಿಯ ಕೊಳಚೆ ನೀರು ಸೇರ್ತಿದೆ. ಹಾಗಾಗಿ ಅಲ್ಲಿ ಪಕ್ಷಿಗಳಿಗೆ ಅಪಾಯದ ಸ್ಥಿತಿ ಇದೆ.

 

0

Leave a Reply

Your email address will not be published. Required fields are marked *