ವಿಡಿಯೋ ಮಾಡಿಟ್ಟು ಬ್ಯಾಂಕ್ ದಿನಗೂಲಿ ನೌಕರ ಆತ್ಮಹತ್ಯೆ

ಬಳ್ಳಾರಿ: ಬ್ಯಾಂಕ್ ಮ್ಯಾನೇಜರ್ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿಡಿಯೋ ಮಾಡಿಟ್ಟು ಕಾಲುವೆಗೆ ಹಾರಿ ದಿನಗೂಲಿ ನೌಕರ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಜಿಲ್ಲೆಯ ಅಲ್ಲಿಪುರ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್​​ನಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ಕೃಷ್ಣ ಆತ್ಮಹತ್ಯೆ ಮಾಡಿಕೊಂಡ ದಿನಗೂಲಿ ನೌಕರ. ಈತ ಆತ್ಮಹತ್ಯೆಗೂ ಮುನ್ನ ಬ್ಯಾಂಕ್ ಮ್ಯಾನೇಜರ್ ಶಿವಪ್ರಸಾದ್ ವಿರುದ್ಧ ಕಿರುಕುಳ ಆರೋಪ ಮಾಡಿ ವಿಡಿಯೋ ಮಾಡಿಟ್ಟಿದ್ದಾನೆ. ಕೃಷ್ಣ ಮಾಡಿಟ್ಟ ವಿಡಿಯೋ ಸುದ್ದಿ ಟಿವಿಗೆ ಲಭ್ಯವಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೃತ ದಿನಗೂಲಿ ನೌಕರ ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮದ ನಿವಾಸಿಯಾಗಿದ್ದು, ಸೋಮವಾರ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬ್ಯಾಂಕ್ ಮ್ಯಾನೇಜರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ಬ್ಯಾಂಕ್ ಉದ್ಯೋಗಿಗಳು ಕೂಡ ಕೃಷ್ಣ ಒಳ್ಳೆಯ ಹುಡುಗ. ಈ ಮ್ಯಾನೇಜರ್ ಕಾಟ ಸಾಕಾಗಿದೆ ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0

Leave a Reply

Your email address will not be published. Required fields are marked *