ಬೆಂಗಳೂರು ಕೆರೆಗಳಿಗೆ ಸಿಗುತ್ತಾ ಪುನಶ್ಚೇತನ ಭಾಗ್ಯ?

ಮಹಾನಗರಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಬೆಳೆಯುತ್ತಲೇ ಇದೆ. ಜೊತೆಗೆ ದಿನಬಳಕೆಯ ನೀರಿನ ಪ್ರಮಾಣದಲ್ಲೂ ಏರಿಕೆಯಾಗುತ್ತಿದೆ. ಹೀಗೆ ಬಳಸಲ್ಪಟ್ಟ ನೀರನ್ನು ಮರುಬಳಕೆಗೆ ಯೋಗ್ಯವಾಗುವಂತೆ ಮಾಡಿ, ಅವುಗಳಿಂದ ನಗರದ ಕೆರೆಗಳಿಗಾಗುವ ಸಮಸ್ಯೆಯನ್ನು ಪೂರ್ಣ ಪ್ರಮಾಣದಲ್ಲಿ ನಿಲ್ಲಿಸುವ ದೃಷ್ಟಿಯಿಂದ ಸರ್ಕಾರ ಕಾರ್ಯಪ್ರವೃತ್ತವಾಗಿದೆ.

ಈಗಾಗಲೇ ನೀರು ಮರುಬಳಕೆಯ 4 ಪ್ರಾಜೆಕ್ಟ್ ಗಳನ್ನು ಮುಖ್ಯಮಂತ್ರಿಗಳು ಸದ್ಯದಲ್ಲೇ ಉದ್ಘಾಟಸಲಿದ್ದು, ಇನ್ನುಳಿದ ಎಸ್ ಟಿಪಿಗಳು ಸರಿಯಾಗಿ ತಯಾರಾದ ಬಳಿಕ ಡಿಸೆಂಬರ್ ನಲ್ಲಿ ಅವುಗಳೂ ಕಾರ್ಯನಿರ್ವಹಿಸಲಿದೆ. ಒಟ್ಟಾರೆ ಈಗಾಗಲೇ ಬೆಂಗಳೂರಿನಲ್ಲಿ ಬಳಸಲ್ಪಡುತ್ತಿರುವ ನೀರಿನ ಶೇಕಡಾ 80ರಷ್ಟನ್ನು ಮರುಬಳಕೆಯಾಗುವಂತೆ ಸರ್ಕಾರ ನಿರ್ಧರಿಸಲಿದ್ದು, 2020ರ ಒಳಗೆ ಪೂರ್ಣಪ್ರಮಾಣದಲ್ಲಿ ನೀರಿನ ಶುದ್ಧಿಕರಣ ಮತ್ತು ಮರುಬಳಕೆಗೆ ಯೋಗ್ಯವಾಗುವಂತೆ ಮಾಡಲಾಗುವುದು ಅಂತಾರೆ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್.

ಪುನಶ್ಚೇತನಗೊಂಡ ನೀರನ್ನು ಸಣ್ಣ ನೀರಾವರಿ ನಿಗಮ ಕೆರೆಗಳಿಗೆ ಮರುಪೂರಣ ಮಾಡುವ ಯೋಜನೆ ರೂಪಿಸಿದ್ದು, ಇದರಿಂದ ಕೋಲಾರ, ಹೊಸಕೋಟೆ, ಚಿಕ್ಕಬಳ್ಳಾಪುರ, ಆನೇಕಲ್ ಭಾಗಗಳಲ್ಲಿ ಬಳಕೆಗೆ ಯೋಗ್ಯವಾಗುವಂತೆ ಮಾಡಲಾಗುವುದು. ಇದರಿಂದ ನೀರು ಮರುಬಳಕೆಯಾಗಲಿದ್ದು, ಕಲುಷಿತ ನೀರು ಕೆರೆಗಳನ್ನು ಸೇರುವುದನ್ನು ತಪ್ಪಿಸಬಹುದು ಎಂದರು.
ಒಟ್ನಲ್ಲಿ ಕಲುಷಿತ ನೀರು ಕೆರೆಗಳನ್ನು ಸೇರಿ, ನಿರ್ಮಾಣವಾಗುತ್ತಿದ್ದ ಸಮಸ್ಯೆಗಳಿಗೆ ಇನ್ನಾದರೂ ಮುಕ್ತಿ ಸಿಗುತ್ತದೆ ಎಂಬ ಭರವಸೆಯನ್ನು ಸರ್ಕಾರ ನೀಡಿದೆ. ಇದು ಎಷ್ಟರಮಟ್ಟಿಗೆ ಯಶ ಕಾಣಲಿದೆ ಅನ್ನೋದನ್ನು ಕಾದು ನೋಡಬೇಕು.

ಪವಿತ್ರ ಬಿದ್ಕಲ್ ಕಟ್ಟೆ, ಮೆಟ್ರೋ ಬ್ಯುರೋ, ಸುದ್ದಿ ಟಿವಿ

0

Leave a Reply

Your email address will not be published. Required fields are marked *