ಪೃಥ್ವಿ II ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರಯೋಗ ಯಶಸ್ವಿ

ಭುವನೇಶ್ವರ: ಭಾರತೀಯ ಸೇನೆ ಪೃಥ್ವಿ II ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರಯೋಗದಲ್ಲಿ ಯಶಸ್ವಿಯಾಗಿದೆ. 9 ಮೀಟರ್​ ಎತ್ತರ, 1 ಮೀಟರ್ ದಪ್ಪದ ಹಾಗೂ 4.6 ಟನ್ ತೂಕದ ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಓ) ತಯಾರಿಸಿತ್ತು. ಪೃಥ್ವಿ II ಕ್ಷಿಪಣಿ ದ್ರವ ಮತ್ತು ಘನ ಇಂಧನಗಳಿಂದ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಒಡಿಶಾದ ಕರಾವಳಿ ತೀರದಲ್ಲಿ ಇಂದು 9:50ಕ್ಕೆ ಪ್ರಯೋಗ ನಡೆಸಲಾಗಿದೆ. ರಕ್ಷಣಾ ಇಲಾಖೆಯ ಪ್ರಕಾರ, ಸ್ವದೇಶಿ ನಿರ್ಮಿತ ಪೃಥ್ವಿ II ಕ್ಷಿಪಣಿಯನ್ನು, ಚಂದಿಪುರದ ಉಡಾವಣಾ ನೆಲೆ 3ರಿಂದ ಉಡಾಯಿಸಲಾಗಿದೆ. ಡಿಆರ್​ಡಿಒ ಸಹಯೋಗದಲ್ಲಿ ಭಾರತೀಯ ಸೇನೆಯ ಭಾಗವಾಗಿರುವ ಎಸ್​ಎಫ್​​ಸಿ ಪಡೆ ಪ್ರಯೋಗದಲ್ಲಿ ಯಶಸ್ವಿಯಾಗಿದೆ.

0

Leave a Reply

Your email address will not be published. Required fields are marked *