ದಿನಕರನ್​ಗೆ ಜಾಮೀನು ನೀಡಿದ ಹಜಾರಿ ಕೋರ್ಟ್​

ನವದೆಹಲಿ: ಎಐಎಡಿಎಂಕೆ ಚಿಹ್ನೆ ಮತ್ತು ಪಕ್ಷವನ್ನು ಉಳಿಸಿಕೊಳ್ಳುವ ಸಲುವಾಗಿ ಚುನಾವಣಾ ಆಯೋಗಕ್ಕೆ ಲಂಚ ನೀಡಲು ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಟಿ ಟಿ ವಿ ದಿನಕರನ್​ ಜಾಮೀನು ಪಡೆದಿದ್ದಾರೆ. ದೆಹಲಿಯ ಹಜಾರಿ ಕೋರ್ಟ್ ಸಹ ಆರೋಪಿ ಮಲ್ಲಿಕಾರ್ಜುನ್​ಗೆ ಕೂಡ ಜಾಮೀನು ನೀಡಿದೆ. 5 ಲಕ್ಷ ರೂ. ವೈಯಕ್ತಿಕ ಬಾಂಡ್ ಆಧಾರದಲ್ಲಿ ಜಾಮೀನು ನೀಡಲಾಗಿದೆ. ಅಲ್ಲದೇ, ಲಂಚ ಪ್ರಕರಣದ ಕುರಿತು ಪಿತೂರಿಯನ್ನು ಸಾಬೀತುಗೊಳಿಸಿ ಎಂದು ಸಿಬಿಐಗೆ ಕೋರ್ಟ್ ಇದೇ ವೇಳೆ ಸೂಚನೆ ನೀಡಿದೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ದೆಹಲಿ ಪೊಲೀಸರ ವಶದಲ್ಲಿದ್ದ ಎಐಎಡಿಎಂಕೆ ಉಪಾಧ್ಯಕ್ಷ ದಿನಕರನ್ ತುಸು ನಿರಾಳರಾಗಿದ್ದಾರೆ.

0

Leave a Reply

Your email address will not be published. Required fields are marked *