ಬೆನ್ನು ನೋವಿದ್ದರೆ ಹೀಗೆ ಮಾಡಿ ನೋಡಿ

ಬೆನ್ನು ನೋವಿಗೆ ಕಾರಣ:

ಲೋಯರ್​​ ಬ್ಯಾಕ್​ನಲ್ಲಿ ರಕ್ತದ ಹರಿತ ಕಡಿಮೆಯಾಗುವುದರಿಂದ ಅಲ್ಲಿರುವ ಸ್ನಾಯುಗಳು ಮತ್ತು ಮೂಳೆಗಳು ಬಲಹೀನವಾಗುತ್ತವೆ. ಆದ್ದರಿಂದ ಒಂದೇ ಸ್ಥಳದಲ್ಲಿ ಕುಳಿತುಕೊಂಡು ಕೆಲಸ ಮಾಡಿದರೆ, ಭಾರವನ್ನು ಎತ್ತಿದಾಗ ಮತ್ತು ಹೆಚ್ಚು ಸಮಯ ಬಗ್ಗಿ ಕೆಲಸ ಮಾಡಿದಾಗ ಬೆನ್ನು ನೋವು ಬರುತ್ತದೆ.

ಉದ್ದಿನ ಬೇಳೆ ಸೇವನೆ: 

ಉದ್ದಿನ ಬೇಳೆ ಬೆನ್ನು ನೋವಿಗೆ ತುಂಬ ಬಲವನ್ನು ಕೊಡುತ್ತದೆ. ಉದ್ದಿನ ಬೇಳೆಯಲ್ಲಿ ಅಧಿಕವಾಗಿರುವ ಮೆಗ್ನೀಷಿಯಮ್​​​, ಐರನ್​, ಕ್ಯಾಲ್ಸಿಯಮ್​​​, ವಿಟಮಿನ್​​ B-12 ದೇಹಕ್ಕೆ ಒಳ್ಳೆಯ ಆರೋಗ್ಯವನ್ನು ಕೊಡುವುದಲ್ಲದೆ, ನಮ್ಮ ಮೂಳೆಗಳನ್ನೂ ಸಹ ಗಟ್ಟಿಯಾಗುವಂತೆ ಮಾಡುತ್ತದೆ. ಆದ್ದರಿಂದ ಉದ್ದಿನ ಬೇಳೆಯನ್ನು ವಾರಕ್ಕೆ 2 ಬಾರಿಯಾದರು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಗಸಗಸೆ ಹಾಗೂ ಕಲ್ಲು ಸಕ್ಕರೆ:

ಗಸಗಸೆ, ಬಿಳಿಯ ಕಲ್ಲು ಸಕ್ಕರೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು, ಪುಡಿ ಮಾಡಿ ಇಟ್ಟುಕೊಳ್ಳಬೇಕು. ಪ್ರತಿದಿನ ಬೆಚ್ಚನೆಯ ಹಾಲಿನಲ್ಲಿ ಈ ಪುಡಿಯನ್ನು ಬೆರಸಿ, ಬೆಳಗಿನ ಜಾವ ಹಾಗೂ ಸಾಯಂಕಾಲ ಸೇವಿಸುವುದರಿಂದ ಬೆನ್ನು ನೋವು ಬೇಗನೆ ನಿವಾರಿಸಿಕೊಳ್ಳಬಹುದು.

ಬೆಳ್ಳುಳ್ಳಿ ಹಾಗೂ ಸಾಸಿವೆ ಎಣ್ಣೆ:

ಹೆಚ್ಚು ಬೆನ್ನು ನೋವಿನಿಂದ ಬಳಲುತ್ತಿರುವವರು, ಚಿಕ್ಕದಾಗಿ ಕತ್ತರಿಸಿದ ಬೆಳ್ಳುಳ್ಳಿಯ ತುಂಡನ್ನು ಸಾಸಿವೆ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಮಿಕ್ಸ್​​​ ಆಗುವವರೆಗೂ ಕುದಿಸಿರಿ. ಸ್ವಲ್ಪ ತಣ್ಣಗಾದ ನಂತರ ಬೆನ್ನಿನ ಮೇಲೆ ಹಾಕಿ ನಯವಾಗಿ ಮಸಾಜ್​​​ ಮಾಡಬೇಕು. 1 ಗಂಟೆಯ ನಂತರ ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಬೇಕು. ಹೀಗೆ ಕ್ರಮವಾಗಿ ಮಾಡುವುದರಿಂದ ಬೆನ್ನು ನೋವಿನಿಂದ ಬೇಗ ಉಪಶಮನ ಪಡೆಯಬಹುದು.

ಮೇಲೆ ಹೇಳಿರುವ ಸಲಹೆಗಳ ಜೊತೆಗೆ ಕ್ರಮವಾಗಿ ವಾಕಿಂಗ್​​ ಹಾಗೂ ವ್ಯಾಯಾಮ ಮಾಡುವುದರಿಂದ, ಕ್ಯಾಲ್ಸಿಯಮ್​​​ ರಿಚ್​​​​ಫುಡ್​​​ ಹೆಚ್ಚಾಗಿ ತೆಗೆದುಕೊಳ್ಳುವುದರಿಂದ ಬೆನ್ನು ನೋವನ್ನು ಬರದಂತೆ ಸಹ ನೋಡಿಕೊಳ್ಳಬಹುದು.

0

Leave a Reply

Your email address will not be published. Required fields are marked *