ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಕಪಿಲ್ ವಿರುದ್ಧ ಕಿಡಿಕಾರಿದ ಪ್ರಧಾನಿ ಮೋದಿ

ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ವಿವಾದ ಕುರಿತ ವಿಚಾರಣೆಯನ್ನು ಲೋಕಸಭೆ ಚುನಾವಣೆ ಬಳಿಕ ನಡೆಸಿ ಎಂಬ ಕಪಿಲ್​ ಸಿಬಲ್​ ವಾದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಪ್ರಧಾನಿ ಮೋದಿ ಚುನಾವಣೆಗೂ ರಾಮಮಂದಿರ ವಿಚಾರಕ್ಕೂ ಏನು ಸಂಬಂಧ? ಎಂದು ಕಪಿಲ್​ ವಿರುದ್ಧ ಕಿಡಿಕಾರಿದ್ದಾರೆ. ಸುನ್ನಿ ಬೋರ್ಡ್​​ನಿಂದಲೂ ಸಿಬಲ್​ ನಿಲುವಿಗೆ ಆಕ್ಷೇಪ ಕೇಳಿಬಂದಿದೆ.

ಧ್ವಂಸ ಪ್ರಕರಣದ ವಿಚಾರಣೆ 2019ರ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಚುನಾವಣೆ ಮುಗಿದ ನಂತರ ವಿಚಾರಣೆ ನಡೆಸಿ ಎಂದು ಅವರು ನಿನ್ನೆ ಸುಪ್ರೀಂ ಕೋರ್ಟ್​​ನಲ್ಲಿ ವಾದಿಸಿದ್ದರು. ಅವರ ಈ ವಾದ ವಿವಾದಕ್ಕೆ ಕಾರಣವಾಗಿದೆ.

ಇಂದು ಗುಜರಾತ್​ನ ಧಂಡುಕಾದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಕಪಿಲ್​ ಸಿಬಲ್​ ವಿರುದ್ಧ ವಾಗ್ದಾಳಿ ನಡೆಸಿದರು. ರಾಮಮಂದಿರ ನಿರ್ಮಾಣ ವಿಚಾರಕ್ಕೂ ಲೋಕಸಭಾ ಚುನಾವಣೆಗೂ ಏನು ಸಂಬಂಧ? ರಾಮಮಂದಿರ ವಿಚಾರವನ್ನು 2019ರ ಲೋಕಸಭಾ ಚುನಾವಣೆಗೆ ಯಾಕೆ ಹೋಲಿಸಬೇಕು? ಕಪಿಲ್​ ಸಿಬಲ್​ಗೆ ಈ ರೀತಿ ಹೇಳಲು ಯಾವುದೇ ಅಧಿಕಾರವಿಲ್ಲ ಎಂದು ಕಿಡಿಕಾರಿದ್ದಾರೆ.

ಕಪಿಲ್​ ಸಿಬಲ್​ ವಿರುದ್ಧ ಸುನ್ನಿ ಬೋರ್ಡ್​​ ಗರಂ

ಕಪಿಲ್​ ಸಿಬಲ್​ ಈ ನಡೆಗೆ ಹಲವು ಚಿಂತಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಕಪಿಲ್​ ಸಿಬಲ್​ ಬಾಬ್ರಿ ಮಸೀದಿ ಧ್ವಂಸ ವಿಚಾರದಲ್ಲಿ ಸುನ್ನಿ ಮುಸ್ಲಿಂ ಸಮುದಾಯ​ ಕಪಿಲ್​ ವಿರುದ್ಧ ಗರಂ ಆಗಿದೆ. ಇದು ನಮ್ಮ ನಿಲುವಲ್ಲ. ಸಿಬಲ್​ ಅವರ ವೈಯಕ್ತಿಕ ನಿಲುವು. ಪ್ರಕರಣ ಬೇಗ ಇತ್ಯರ್ಥವಾಗಬೇಕೆಂಬುದೇ ನಮ್ಮ ಆಶಯ ಎಂದಿದ್ದಾರೆ.

ಆದರೆ, ಬಾಬ್ರಿ ಮಸೀದಿ ಕಾರ್ಯಪಡೆ ಕಪಿಲ್ ಸಿಬಲ್ ಅವರ ವಾದವನ್ನು ಸಮರ್ಥಿಸಿದೆ. ಈ ಮೂಲಕ ಮುಸ್ಲಿಂ ಸಮುದಾಯದಲ್ಲಿ ಕಪಿಲ್ ಪರ ಮತ್ತು ವಿರುದ್ಧ ವಾದಗಳು ವ್ಯಕ್ತವಾಗಿವೆ. ಇನ್ನೊಂದೆಡೆ ಗುಜರಾತ್​ ಚುನಾವಣಾ ಪ್ರಚಾರದಲ್ಲಿ ಅಯೋಧ್ಯೆ ರಾಮಮಂದಿರದ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದೇಕೆ ಎಂಬ ಟೀಕೆಗಳೂ ಕೂಡ ಕೇಳಿಬರುತ್ತಿವೆ

ಜ್ಯೋತಿ ದಫೇದಾರ್​ ನ್ಯಾಷನಲ್​ ಡೆಸ್ಕ್​ ಸುದ್ದಿ ಟಿವಿ

0

Leave a Reply

Your email address will not be published. Required fields are marked *