ಸದ್ಯದಲ್ಲೇ ಡಿಕೆಶಿ ರಾಜೀನಾಮೆ ಕೊಡ್ತಾರೆ…

ಮೂರ್ನಾಲ್ಕು ದಿನದಲ್ಲಿ ಡಿಕೆಶಿ ರಾಜೀನಾಮೆ ನೀಡಲಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದಲ್ಲಿ ಮಾತನಾಡಿದ ಅವರು ಇಂಧನ ಸಚಿವ ಡಿ.ಕೆ ಶಿವಕುಮಾರ್ ಮೇಲೆ ಐಟಿ ದಾಳಿ ಮಾಡಿದಾಗ ಅಕ್ರಮ ಆಸ್ತಿ ಗಳಿಕೆ ಮಾಡಿರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ. ಡಿ.ಕೆ.ಶಿವಕುಮಾರ್ ರಾಜೀನಾಮೆ ಕೊಡುವ ಪರಿಸ್ಥಿತಿ ಬರಲಿದೆ ಎಂದು ತಿಳಿಸಿದ್ರು. ಇನ್ನು ಈಗಾಗಲೇ ಕುಟುಂಬ ಸದಸ್ಯರನ್ನ ಸಹ ವಿಚಾರಣೆ ಮಾಡಲಾಗಿದೆ. ಆದಾಯ ತೆರಿಗೆ, ಜಾರಿ ನಿರ್ದೇಶಾನಾಲಯ ಡಿ.ಕೆ ಶಿವಕುಮಾರ್ ಮೇಲೆ ಕ್ರಮ ಕೈಗೊಳ್ಳಲಿದೆ. ಆಗ ಡಿ.ಕೆ ಶಿವಕುಮಾರ ಅನಿವಾರ್ಯವಾಗಿ ರಾಜಿನಾಮೆ ನೀಡಲೇ ಬೇಕು ಎಂದ್ರು.

0

Leave a Reply

Your email address will not be published. Required fields are marked *