ಚಂದನವನಕ್ಕೆ ಮತ್ತೆ ಮರಳಿದ ಆಯಿಶಾ

ಸ್ಯಾಂಡಲ್​ವುಡ್​ನಲ್ಲಿ ಚಿಕ್ಕ ಗ್ಯಾಪ್​ ನಂತರ ಇದೀಗ ಆಯಿಶಾ ಮತ್ತೆ ಚಂದನವನಕ್ಕೆ ವಾಪಾಸ್ಸಾಗಿದ್ದಾರೆ. ಜನಗಣಮನ ಅನ್ನೋ ಹೊಸ ಚಿತ್ರದಲ್ಲಿ ಔಟ್​ ಆಂಡ್​ ಔಟ್​ ಮಾಸ್​ಲುಕ್​ನಲ್ಲಿ ಆಯಿಶಾ ಕಾಣಿಸಿಕೊಂಡಿದ್ದಾರೆ. ಇದೀಗ ಚಿತ್ರದ ಟೀಸರ್​, ಟ್ರೈಲರ್​ ಹಾಗೂ ಹಾಡು ರಿಲೀಸ್​ ಆಗಿದೆ.

ಸ್ಯಾಂಡಲ್‍ವುಡ್‍ನ ಲೇಡಿ ಬ್ರೂಸ್ಲೀ ಅಂತಲೇ ಕರೆಯಿಸಿಕೊಳ್ಳುವ ಆಯಿಶಾ ಚನ್ನಮ್ಮ ಐಪಿಎಸ್, ಒನಕೆ ಓಬವ್ವ, ಬೈರವಿಯಂತಹ ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸಿದ್ರು. ಇದೀಗ ಜನಗಣಮನ ಅನ್ನೋ ಸಮಾಜಿಕ ಕಳಕಳಿಯಿರುವ ಚಿತ್ರದಲ್ಲಿ ಆಯಿಶಾ ಅಭಿನಯಿಸ್ತಿದ್ದಾರೆ. ಇದೂ ಕೂಡ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಸಾಮಾನ್ಯ ಜನರು ಎದುರಿಸುವ ಸಮಸ್ಯೆಗಳ ವಿರುದ್ದ ಖಾಕಿ ತೊಟ್ಟು ಆಬ್ಬರಿಸುವ ಖಡಕ್​ ಪೊಲೀಸ್​ ಪಾತ್ರದಲ್ಲಿ ಆಯಿಶಾ ಮಿಂಚಿದ್ದಾರೆ.

ಈ ಚಿತ್ರವನ್ನ ಶಶಿಕಾಂತ್ ನಿರ್ದೆಶನವನ್ನು ಮಾಡಿದ್ದು ಚಿತ್ರಜಗತ್ತಿನಲ್ಲಿ 10ವರ್ಷಗಳ ಕಾಲ ದುಡಿದ ಅನುಭವವನ್ನು ಹೊಂದಿದ್ದಾರೆ. ಇನ್ನು ಸಾಂಭಶಿವ ರೆಡ್ಡಿ ಬಂಡವಾಳ ಹೂಡಿದ್ದು ಪರರಾಜ್ಯದಿಂದ ಬಂದು ನಮ್ಮ ಕನ್ನಡ ಇಂಡಸ್ಟ್ರೀಯಲ್ಲಿ ಚಿತ್ರವನ್ನ ಮಾಡುವ ಮನಸ್ಸು ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಷ್ಯ

ಇನ್ನು ಚಿತ್ರದ ಹಾಡುಗಳು ಕೂಡ ತುಂಬ ವಿಭಿನ್ನವಾಗಿದ್ದು, ಸನ್ನಿವೇಶಕ್ಕೆ ತಕ್ಕಂತೆ ಹಾಡುಗಳನ್ನ ರಚಿಸಲಾಗಿದೆ. ಇಂಟರೆಸ್ಟಿಂಗ್​ ಅಂದ್ರೆ ಸಿನಿಮಾದ ಮೇನ್​ ಅಟ್ರಾಕ್ಷನ್ನೇ ಆಯಿಶಾ. ಹೀಗಾಗಿ ಸಖತ್​ ಸ್ಟಂಟ್ಸ್​ ಹಾಗೂ ಏಳು ರೀತಿಯ ಫೈಟ್ಸ್ ಸೀನ್​ಗಳು ಇರೋದ್ರಿಂದ ಸಿಕ್ಕಾಪಟ್ಟೆ ವರ್ಕೌಟ್​ ಮಾಡಿದ್ದೀನಿ ಅಂತಾರೆ ಆಯಿಶಾ.​

ಜನಗಣಮನ ಚಿತ್ರವು ಬೆಂಗಳೂರು, ಮೈಸೂರು, ಮಡಿಕೇರಿಯಂತಹ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಿದ್ದು, ಮುಂದಿನ ತಿಂಗಳು ತೆರೆಗೆ ಬರಲು ಸಖತ್​ ಪ್ಲಾನ್​ ಮಾಡಲಾಗಿದೆಯಂತೆ. ಅಂತು ಟೀಸರ್​, ಟ್ರೈಲರ್​ ಮೂಲಕ ಗಮನ ಸೆಳೆದಿರುವ ಈ ಚಿತ್ರ ತೆರೆಗೆ ಬಂದ ನಂತರ ಯಾವ ರೀತಿ ಸದ್ದು ಮಾಡುತ್ತೋ ನೋಡಬೇಕು.

ರೆನಿಟ ಫಿಲ್ಮ್ ಬ್ಯೂರೊ ಸುದ್ದಿಟಿವಿ

0

Leave a Reply

Your email address will not be published. Required fields are marked *