ಒಡಿಶಾ ಕೋನಾರ್ಕ್ ದೇವಾಲಯ ಕುರಿತು ಮಾನಹಾನಿಕರ ಲೇಖನ: ಲೇಖಕನ ಬಂಧನ

ಚಿತ್ರ ಕೃಪೆ: ANI

ಭುವನೇಶ್ವರ: ಒಡಿಶಾದ ಕೋನಾರ್ಕ್ ದೇವಾಲಯದ ವಿರುದ್ಧ ಮಾನಹಾನಿಕರವಾಗಿ ಬರೆದ ಆರೋಪದಡಿ ಲೇಖಕ ಅಭಿಜಿತ್ ಐಯರ್ ಮಿತ್ರಾ ಅವರನ್ನು ಬಂಧಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಒಂದು ವೇಳೆ ನೀವು ನನ್ನ ಬರಹಗಳನ್ನು ನೋಡಿದರೆ, ನಾನು ಒಡಿಶಾವನ್ನು ಹೊಗಳಿ ಬರೆದಿರುವ ಸಾಕಷ್ಟು ಸಂಶೋಧನೆಗಳನ್ನು ಕಾಣಬಹುದು. ಅನವಶ್ಯಕವಾಗಿ ಕೆಟ್ಟ ಪದವನ್ನು ಸಿಎಂ ಮತ್ತು ಅವರ ಕಚೇರಿ ವಿರುದ್ಧ ಬಳಸಿರುವುದಕ್ಕೆ ನಾನು ಕ್ಷಮೆ ಕೋರುತ್ತೇನೆ ಎಂದು ಅವರು ಹೇಳಿದ್ದಾರೆ.

ಒಡಿಶಾದ ಕುರಿತು ನನಗೆ ಸದಾ ಹೆಮ್ಮೆಯಿದೆ. ನಾನು ಇತಿಹಾಸ ಮತ್ತು ಭಾರತೀಯ ಸಂಸ್ಕೃತಿಗೆ ಒಡಿಶಾದ ಕೊಡುಗೆ ಕುರಿತು ಸಂಶೋಧನೆ ನಡೆಸಿದ್ದೇನೆ. ನಾನು ಒಡಿಶಾವನ್ನು ಪ್ರೀತಿಸುತ್ತೇನೆ. ನನ್ನ ಟ್ವೀಟರ್ ಖಾತೆ ಇರುವುದು ಫನ್​​ ಮಾಡಲಿಕ್ಕಾಗಿಯೇ ಹೊರತು, ವೃತ್ತಿಗಲ್ಲ ಎಂದು ಅವರು ಸ್ಪಷ್ಟೀಕರಣ ನೀಡಿದ್ದು, ಸಾರ್ವಜನಿಕ ವೇದಿಕೆಗಳಲ್ಲಿ ಮೌನವಾಗಿರಬೇಕು ಎಂಬ ಸಂಗತಿ ನನ್ನ ಅರಿವಿಗೆ ಬಂದಿದೆ. ನೀವು ಹೇಳಬೇಕಿರುವ ಸಂಗತಿಯನ್ನು ಪ್ರಬುದ್ಧವಾಗಿ ಹೇಳಲು ಪ್ರಯತ್ನಿಸಬೇಕು ಎಂದಿದ್ದಾರೆ.

0

Leave a Reply

Your email address will not be published. Required fields are marked *