ಆಫ್ಘಾನಿಸ್ತಾನದ ಭಾರತೀಯ ರಾಯಭಾರ ಕಚೇರಿ ಬಳಿ ಪ್ರಬಲ ಸ್ಫೋಟ

ಕಾಬೂಲ್: ಆಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿ ಬಳಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ. ಆದರೆ, ಇದುವರೆಗೆ ಸ್ಫೋಟಕ್ಕೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಜೊತೆಗೆ ಸ್ಫೋಟದ ಹೊಣೆಯನ್ನು ಯಾವುದೇ ಭಯೋತ್ಪಾದಕ ಸಂಘಟನೆಗಳು ಹೊತ್ತುಕೊಂಡಿಲ್ಲ. ರಾಜಧಾನಿ ಕಾಬೂಲ್​​ನಲ್ಲಿರುವ ವಜೀರ್ ಅಕ್ಬರ್ ಖಾನ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ರಕ್ಷಣಾ ಸಚಿವಾಲಯದ ಸಮೀಪವೇ ಈ ಸ್ಫೋಟ ಸಂಭವಿಸಿದ್ದು, 80ನಾಗರಿಕರು ಬಲಿಯಾಗಿ, 350 ನಾಗರಿಕರು ಗಾಯಗೊಂಡಿದ್ದಾರೆ.

ಸ್ಫೋಟದಿಂದಾಗಿ ಕಾಬೂಲ್ ನಗರದ ಹೃದಯ ಭಾಗದಲ್ಲಿ ದಟ್ಟ ಹೊಗೆ ವ್ಯಾಪಿಸಿಕೊಂಡಿತ್ತು. ಅಧ್ಯಕ್ಷರ ಅರಮನೆ, ವಿದೇಶೀ ರಾಯಭಾರಿಗಳ ಕಚೇರಿಗಳ ಬಳಿ ಸ್ಫೋಟ ನಡೆದಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಭಾರತೀಯ ರಾಯಭಾರಿ ಕಚೇರಿಯಿಂದ ಕೇವಲ 1.5 ಕಿ. ಮೀ. ದೂರದಲ್ಲಿ ಸ್ಫೋಟ ಸಂಭವಿಸಿದೆ. ಭಾರತೀಯ ಅಧಿಕಾರಿಗಳು ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

ಜರ್ಮನಿ ರಾಯಭಾರ ಕಚೇರಿಯ ಸನಿಹದಲ್ಲೇ ಪ್ರಬಲ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಭಾರತ ರಾಯಭಾರ ಕಚೇರಿ ಕೂಡ ಹಾನಿಗೊಳಗಾಗಿದೆ. ಸ್ಫೋಟದ ತೀವ್ರತೆಯಿಂದಾಗಿ ಭಾರತೀಯ ರಾಯಭಾರ ಕಚೇರಿಯ ಕಿಡಕಿಗಳಿಗೆ ಹಾನಿಯಾಗಿದೆ.ಸ್ಫೋಟ ಕುರಿತು ತನಿಖೆ ನಡೆಸಲು ಆಫ್ಘನ್ ರಾಷ್ಟ್ರೀಯ ಭದ್ರತಾ ಪಡೆ (ಎಎನ್ಎಸ್​​ಎಫ್​) ತಂಡಗಳನ್ನು ನಿಯೋಜಿಸಿದೆ. ಅಲ್ಲದೇ ಪರಿಹಾರ ಕಾರ್ಯಾಚರಣೆ ಮತ್ತು ನುಸುಳುಕೋರರ ನಿಯಂತ್ರಣಕ್ಕೆ ಎಎನ್​ಎಎಸ್​ಎಫ್​​ ಮುಂದಾಗಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *