ಪ್ರಕೃತಿ, ಬದುಕನ್ನ ಬಿಂಬಿಸೋ ಗಾಢ ವರ್ಣಗಳ ಅಮೂರ್ತ ಚಿತ್ರಗಳು…

ಬದುಕಿನ ವಿಭಿನ್ನ ಅನುಭವನ್ನ ಹೇಳುವ ಕಲಾಕೃತಿಗಳ ಪ್ರದರ್ಶನವನ್ನ ಕಸ್ತೂರಿಬಾ ರಸ್ತೆಯ ವೆಂಕಟಪ್ಪ ಆರ್ಟ್​ ಗ್ಯಾಲರಿಯಲ್ಲಿ ಏರ್ಪಡಿಸಲಾಗಿದೆ. ಈ ವಿಶಿಷ್ಟ ಪ್ರದರ್ಶನ ನಾಳೆ ವರೆಗೆ ನಡೆಯಲಿದ್ದು, ಸಿಲಿಕಾನ್​ ಸಿಟಿ ಮಂದಿ ಕಣ್ತುಂಬಿಕೊಳ್ಳಬಹುದಾಗಿದೆ.ಪ್ರಕೃತಿ, ಬದುಕನ್ನ ಬಿಂಬಿಸೋ ಗಾಢ ವರ್ಣಗಳ ಅಮೂರ್ತ ಚಿತ್ರಗಳು, ಸಂಗೀತದ ಅಲೆಗೆ ಒಡಮೂಡಿದ ಚಿತ್ರವೂ ಒಳಗೊಂಡಂತೆ ಹಲವು ವಿಭಿನ್ನ ಶೈಲಿಯ ಕಲಾಕೃತಿಗಳಿಗೆ ಕಲಾವಿದರು ಬಣ್ಣ ತುಂಬಿದ್ದಾರೆ. ವೆಂಕಟಪ್ಪ ಆರ್ಟ್​ ಗ್ಯಾಲರಿ ಈ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿದೆ. ಜನವರಿ 21ರಿಂದ ಆರಂಭಗೊಂಡಿರೋ ಪ್ರದರ್ಶನ ಜನವರಿ 27ಕ್ಕೆ ಮುಕ್ತಾಯವಾಗಲಿದೆ.

ದಾವಣಗೆರೆ ಹಳೆ ವಿದ್ಯಾರ್ಥಿಗಳ ಸಂಘದ ಕಲಾವಿದರಾದ ಶ್ರೀನಾಥ್​ ಬಿದರೆ, ಬಾಬು ಜತ್ಕರ್​, ಕೆ.ಎಂ.ಶೇಷಗಿರಿ, ಚಿ.ಸು.ಕೃಷ್ಣಸೆಟ್ಟಿ ಒಳಗೊಂಡಂತೆ 20 ಮಂದಿ ಕಲಾವಿದ್ರ 65 ಕಲಾಕೃತಿಗಳನ್ನ ಪ್ರದರ್ಶಿಸಲಾಗಿದೆ. life through window, ಶಹನಾಯಿ ವಾದಕ ಬಿಸ್ಮಿಲ್ಲಾಖಾನ್​ರ ಮನೆ, ಕಪ್ಪು ಹಾಗೂ ಬಿಳುಪಿನಲ್ಲಿ ಪ್ರಕೃತಿಯ ಬಿಂಬ, ಜಲವರ್ಣದ ಅಮೂರ್ತ ಚಿತ್ರಗಳು ನೋಡುಗರನ್ನ ಸೆಳೆಯುತ್ವೆ..ಒಳ ಹೊರನೋಟದ ವ್ಯಕ್ತಿತ್ವ, ತಾಯಿ ಮಗುವಿನ ವಾತ್ಸಲ್ಯ, ಸಮುದ್ರತಟ ಸೌಂದರ್ಯ, ಮೊಬೈಲ್​ನಲ್ಲಿ ಫೋಟೋ ಕ್ಲಿಕ್ಕಿಸೋದು, ಹಳ್ಳಿಯ ಮನೆಗಳ ದೀಪದ ಗೂಡು- devine light ಆಗಿ ಕಲಾವಿದನ ಕ್ರಿಯಾಶೀಲತೆಯ್ನ ಬಿಂಬಿಸಿವೆ. ತೆಪ್ಪದ ಯಾನ, ಉಜ್ಜಯಿನಿ ಸ್ನಾನದ ಛಾಯಾಚಿತ್ರಗಳು ವಿಶೇಷ ಕಲಾಕೃತಿಯಾಗಿ ಹೊರಹೊಮ್ಮುವಂತೆ ಕ್ಲಿಕ್ಕಿಸಿದ್ದಾರೆ ಕಲಾವಿದ ಮಂಜುನಾಥ ಕಲ್ಲೇದೇವರು..ಅಮೂರ್ತ ಚಿತ್ರಗಳು ವೀಕ್ಷಕರ ನೋಟಕ್ಕೆ ತಕ್ಕಂತೆ ಭಾವ ಸೂಸುತ್ವೆ. ಜೊತೆಗೆ ಸಮಕಾಲೀನ ಕೃತಿಗಳನ್ನ ಜಲವರ್ಣ, ಅಕ್ರಾಲಿಕ್​ ಒಳಗೊಂಡಂತೆ ವಿವಿಧ ಮಾಧ್ಯಮಗಳಲ್ಲಿ ಚಿತ್ರಿಸಲಾಗಿದೆ.

0

Leave a Reply

Your email address will not be published. Required fields are marked *