ಅರಬ್ಬರ ರಾಷ್ಟ್ರದಲ್ಲಿ ಇಂದಿನಿಂದ ಏಷ್ಯಾಕಪ್​ ಕಾದಾಟ

ಯುಎಇಯಲ್ಲಿ ಇಂದಿನಿಂದ 14 ನೇ ಏಷ್ಯಾಕಪ್ ಟೂರ್ನಿ ಆರಂಭವಾಗಲಿದೆ. ಮೂರನೇ ಬಾರಿಗೆ ಅರಬ್​ ರಾಷ್ಟ್ರ ಈ ಪ್ರತಿಷ್ಠಿತ ಕ್ರಿಕೆಟ್​​ ಕದನಕ್ಕೆ ಆತಿಥ್ಯ ವಹಿಸಿದೆ. 1984 ರಿಂದ ಆರಂಭವಾದ ಏಷ್ಯಾಕಪ್​ ಈ ವರೆಗೂ 13 ಬಾರಿ ನಡೆದಿದೆ. 12 ಬಾರಿ ಒನ್​ಡೇ ಫಾರ್ಮೆಟ್​​​ ಟೂರ್ನಿ ನಡೆದ್ರೆ, 2016 ರಲ್ಲಿ ಮಾತ್ರ ಮೊದಲ ಬಾರಿ ಟಿ-20 ಫಾರ್ಮೆಟ್​ನಲ್ಲಿ ಸರಣಿ ಆಡಿಸಲಾಗಿತ್ತು. ಆದ್ರೆ ಈ ಬಾರಿ ಮತ್ತೆ ಏಕದಿನ ಮಾದರಿಯಲ್ಲಿ ಟೂರ್ನಿ ಆಯೋಜಿಸಲಾಗಿದೆ.

ಏಷ್ಯಾಕಪ್​ನಲ್ಲಿ ಟೀಮ್ ಇಂಡಿಯಾ ಇಂಡಿಯಾ ಅದ್ಭುತ ದಾಖಲೆ ಹೊಂದಿದೆ.ಈವರೆಗೂ 6 ಬಾರಿ ಟ್ರೋಫಿ ಮುಡಿಗೇರಿಸಿಕೊಡುಸ ಸಾಧನೆ ಮಾಡಿದೆ. ಶ್ರೀಲಂಕಾ 5 ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಪಾಕಿಸ್ತಾನ 2 ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದೆ. ಆದ್ರೆ ಬಾಂಗ್ಲಾದೇಶಕ್ಕೆ ಮಾತ್ರ ಈವರೆಗೂ ಏಷ್ಯಾಕಪ್​ ಕಿರೀಟ ಒಲಿದಿಲ್ಲ. ಇನ್ನೂ ವೈಯಕ್ತಿಕ ಸಾಧನೆಯಲ್ಲೂ ಭಾರತ ಹಾಗೂ ಶ್ರೀಲಂಕಾ ಆಟಗಾರರೇ ಮುಂಚೂಣಿಯಲ್ಲಿದ್ದಾರೆ.

ಶ್ರೀಲಂಕಾದ ಮಾಜಿ ಸ್ಫೋಟಕ ಬ್ಯಾಟ್ಸ್​ಮನ್​ ಸನತ್​ ಜಯಸೂರ್ಯ ಏಷ್ಯಾಕಪ್​ ಬ್ಯಾಟಿಂಗ್ ಸರ್ದಾರ ಎನಿಸಿಕೊಂಡಿದ್ದಾರೆ. ಜಯಸೂರ್ಯ ತಮ್ಮ ಕರಿಯರ್​​ನಲ್ಲಿ ಒಟ್ಟು 25 ಏಷ್ಯಾಕಪ್​ ಮ್ಯಾಚ್​ಗಳನ್ನಾಡಿದ್ದು, 53.04 ಸರಾಸರಿಯಲ್ಲಿ 1220 ರನ್ ಗಳಿಸಿದ್ದಾರೆ. ಈ ಮೂಲಕ ಓವರ್ ಆಲ್ ಏಷ್ಯಾಕಪ್​ ಟೂರ್ನಿಯಲ್ಲಿ ಅತಿಹೆಚ್ಚು ರನ್​ ದಾಖಲಿಸಿದ ನ್ ಬ್ಯಾಟ್ಸ್​​ಮನ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಅಲ್ಲದೆ 6 ಶತಕ ಗಳಿಸುವ ಮೂಲಕ ಅತಿಹೆಚ್ಚು ಶತಕ ಬಾರಿಸಿದ ಆಟಗಾರರ ಪೈಕಿ ನಂಬರ್ ಓನ್​ ಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ.

ಇನ್ನೂ ಶ್ರೀಲಂಕಾದ ಮಾಜಿ ಆಟಗಾರ ಕುಮಾರ್ ಸಂಗಕ್ಕಾರ 24 ಪಂದ್ಯಗಳಿಂದ 48.86 ರ ಸರಾಸರಿಯಲ್ಲಿ 1075 ರನ್ ಬಾರಿಸಿ ಎರಡನೇ ಸ್ಥಾನ ಸಂಪಾದಿಸಿದ್ದಾರೆ. ಜೊತೆಗೆ 4 ಶತಕ ಪೂರೈಸುವ ಮೂಲಕ ಅತಿಹೆಚ್ಚು ಶತಕ ಬಾರಿಸಿದ ಎರಡನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಕ್ರಿಕೆಟ್​ ದೇವರು, ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 23 ಪಂದ್ಯಗಳಲ್ಲಿ ಬ್ಯಾಟ್​ ಬೀಸಿರೋ ಸಚಿನ್ 51.10 ರ ಸರಾಸರಿಯಲ್ಲಿ ಶತಕಗಳ ಸಹಿತ 971 ರನ್​ ಸಿಡಿಸಿದ್ದಾರೆ.

ಏಷ್ಯಾಕಪ್​ ಬೌಲರ್​ಗಳ ಸಾಧನೆಯಲ್ಲೂ ಶ್ರೀಲಂಕಾ ಬೌಲರ್​ಗಳೇ ಪ್ರಾಬಲ್ಯ ಮೆರೆದಿದ್ದಾರೆ. ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳಿಧರನ್​ 24 ಪಂದ್ಯಗಳಲ್ಲಿ 30 ವಿಕೆಟ್​ ಕಬಳಿಸಿ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಮೊದಲ ಸ್ಥಾನಗಳಿಸಿದ್ದಾರೆ. 31 ರನ್​ ನೀಡಿ 5 ವಿಕಟ್​ ಪಡೆದಿದ್ದು ಮುರಳೀಧರನ್ ಬೆಸ್ಟ್​ ಬೌಲಿಂಗ್ ಫಿಗರ್​. ಈ ಪಟ್ಟಿಯ ಎರಡನೇ ಸ್ಥಾನದಲ್ಲೂ ಶ್ರೀಲಂಕಾದ ಲೆಗ್​​ ಸ್ಪಿನ್ನರ್ ಅಜೆಂತಾ ಮೆಂಡಿಸ್​​ ಇದ್ದು, ಮೆಂಡಿಸ್​ ಕೇವಲ 8 ಪಂದ್ಯಗಳಲ್ಲಿ 26 ವಿಕೆಟ್​ ಹೊಡೆದುರುಳಿಸಿದ್ದಾರೆ. ಭಾರತದ ವಿರುದ್ಧದ ಪಂದ್ಯದಲ್ಲಿ 13 ರನ್​ 6 ವಿಕೆಟ್​ ಪಡೆದಿದ್ದು ಮೆಂಡಿಸ್​ರ ಶ್ರೇಷ್ಠ ಸಾಧನೆ. ಪಾಕಿಸ್ತಾನದ ಸ್ಪಿನ್ನರ್​ ಸಯೀದ್ ಅಜ್ಮಲ್​ 12 ಪಂದ್ಯಗಳಲ್ಲಿ 25 ವಿಕೆಟ್​ ಪಡೆಯುವ ಮೂಲಕ ಥರ್ಡ್​ ಪ್ಲೇಸ್​ನಲ್ಲಿದ್ದಾರೆ. ಭಾರತದ ಇರ್ಫಾನ್ ಪಠಾಣ್ 12 ಪಂದ್ಯಗಳಿಂದ 22 ವಿಕೆಟ್​ ಹಾಗೂ ಸಚಿನ್​ 17 ವಿಕೆಟ್ ಕಿತ್ತು ಟಾಪ್ ಟೆನ್​ರೊಳಗೆ ಸ್ಥಾನ ಪಡೆದಿದ್ದಾರೆ.

0

Leave a Reply

Your email address will not be published. Required fields are marked *