ಮನಮೋಹನ್ ಪಾತ್ರದಲ್ಲಿ ಅನುಪಮ್ ಖೇರ್

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕುರಿತ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಕೃತಿ ಆಧರಿಸಿದ ಚಿತ್ರದಲ್ಲಿ ಬಿಜೆಪಿ ಬೆಂಬಲಿಗ ಮತ್ತು ನಟ ಅನುಪಮ್ ಖೇರ್ ಮನಮೋಹನ್ ಸಿಂಗ್ ಅವರ ಪಾತ್ರ ನಿರ್ವಹಿಸಲಿದ್ದಾರೆ. ತಾವು ಮನಮೋಹನ್ ಸಿಂಗ್ ಪಾತ್ರ ನಿರ್ವಹಿಸುತ್ತಿರುವುದಾಗಿ ಖೇರ್ ಒಪ್ಪಿಕೊಂಡಿದ್ದಾರೆ. ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬಾರೂ ಅವರು ರಚಿಸಿರುವ ಈ ಕೃತಿಯನ್ನು ದೇಬುತಂತ್ ವಿಜಯ್ ರತ್ನಾಕರ್ ಗುಟ್ಟೆ ನಿರ್ದೇಶಿಸಲಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಕತೆ ರಚನೆಕಾರ ಹನ್ಸಲ್ ಮೆಹತಾ ಈ ಚಿತ್ರಕ್ಕೆ ಚಿತ್ರಕತೆ ಬರೆಯಲಿದ್ದಾರೆ.

ಕೃತಿ 2014ರ ಲೋಕಸಭೆ ಚುನಾವಣೆಗೂ ಮುನ್ನ ಬಿಡುಗಡೆಯಾಗಿತ್ತು. ಚುನಾವಣೆ ನಡೆಯುವ ಅವಧಿಯುದ್ದಕ್ಕೂ ಈ ಕೃತಿ ಚರ್ಚೆಗೆ ಒಳಗಾಗಿತ್ತು.  ಡಿಸೆಂಬರ್​ 2018ರ ಒಳಗೆ ಮತ್ತು ಲೋಕಸಭೆ ಚುನಾವಣೆಗೂ ಮುನ್ನ ಚಿತ್ರವನ್ನು ಬಿಡಗಡೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ.

0

Leave a Reply

Your email address will not be published. Required fields are marked *