ಸಿಕ್ಕಾಪಟ್ಟೆ ಸೌಂಡ್​ ಮಾಡ್ತಿದ್ದಾನೆ ಅಂಜನಿ ಪುತ್ರ

ಸದ್ಯಕ್ಕೆ ರಿಲೀಸ್​​ಗೆ ಸಿದ್ದವಾಗಿರೋ ಸ್ಟಾರ್​​ ನಟರುಗಳ ಸಿನಿಮಾದಲ್ಲಿ ಮುಂಚುಣಿಯಲ್ಲಿರೋ ಚಿತ್ರವೇ ಈ ಅಂಜನಿಪುತ್ರ. ರಾಜಕುಮಾರ ಸಿನಿಮಾ ನಂತರ ಪ್ರೇಕ್ಷರಿಗೆ ಮತ್ತೊಮ್ಮೆ ಪವರ್​ಸ್ಟಾರ್​​ನ ಫ್ಯಾಮಿಲಿ ಪವರ್ ನೋಡೋಕೆ ಕಾಯ್ತಿರೋ ಪ್ರೇಕ್ಷಕರಿಗೆ ಸಿನಿಮಾ ತಂಡ ಭರ್ಜರಿ ಮೇಕಿಂಗ್​​ ನ ರಿಲೀಸ್​​ ಮಾಡಿದೆ. ಸ್ಯಾಂಡಲ್​ವುಡ್​ನ ಸ್ಟಾರ್​ ಡೈರೆಕ್ಟರ್​ ಎ.ಹರ್ಷ. ಹೇಳಿ ಕೇಳಿ ಆಂಜನೇಯ ಭಕ್ತ ಅನ್ನೋದು ಎಲ್ಲರಿಗೂ ಗೊತ್ತು. ಹೀಗಾಗಿ ತಮ್ಮ ಪ್ರತಿ ಚಿತ್ರಕ್ಕೂ ವಾಯುಪುತ್ರನ ಟೈಟಲ್ ಇಟ್ಟು ಶುಭಕಾರ್ಯ ಮಾಡ್ತಾರೆ ಈ ಆಂಜನೇಯ ಭಕ್ತ ಹರ್ಷ. ಈ ಆಂಜನೇಯನ ಆಶೀರ್ವಾದ ಪವರ್​ ಸ್ಟಾರ್​ಗೂ ಸಿಗಲಿ ಅಂತ ಹರ್ಷ ಅಂಜನಿಪುತ್ರ ಸಿನಿಮಾ ಶುರು ಮಾಡಿದ್ದೇ ಮಾಡಿದ್ದು, ಈ ಮೂವಿ ಸಿಕ್ಕಾಪಟ್ಟೆ ಸೌಂಡ್​ ಮಾಡ್ತಿದೆ.

ಇತ್ತೀಚೆಗಷ್ಟೇ ಗ್ರ್ಯಾಂಡಾಗಿ ಅಂಜನಿಪುತ್ರದ ಹಾಡುಗಳ ರಿಲೀಸ್​ ಆಗಿ, ಪ್ರೇಕ್ಷಕರಿಗೆ ಮುದ ನೀಡಿತ್ತು. ಇನ್ನೂ ಟ್ರೈಲರ್​ಗಾಗಿ ಬಕಪಕ್ಷಿಗಳಂತೆ ಕಾದು ಕುಳಿತಿದ್ದ ಪ್ರೇಕ್ಷಕರಿಗೆ ಲಡ್ಡು ಬಾಯಿಗ್​ ಬಿದ್ದ ಹಾಗೇ ಟ್ರೈಲರ್​ ಕೂಡ ರಿಲೀಸ್​ ಆಯ್ತು. ಪವರ್​ ಸ್ಟಾರ್​ನ ಆ್ಯಕ್ಷನ್ ಪವರ್​, ಕಿರಿಕ್​ ಹುಡುಗಿಯ ಮುದ್ದಾದ ಲವ್​, ಇವೆರೆಡು ಬೆರೆತು ಒಂದಷ್ಟು ಫ್ಯಾಮಿಲಿ ಸೆಂಟಿಮೆಂಟ್​ ಹೊರಹಾಕಿರುವ ಈ ಪವರ್​ ಪ್ಯಾಕ್ಡ್​ ಟ್ರೈಲರ್​ ಸಖತ್​ ಟ್ರೆಂಡಿಂಗ್​ ಕ್ರಿಯೇಟ್​ ಮಾಡಿದೆ. ಇದರ ಬೆನ್ನಲ್ಲೆ ಈಗ ಭರ್ಜರಿ ಮೇಕಿಂಗ್​ ವಿಡಿಯೋ ಕೂಡ ಗಾಂಧಿನಗರದಲ್ಲಿ ಗುನುಗಿಸೋಕೆ ಶುರುವಾಗಿದೆ. ಪುನೀತ್ ರಾಜ್​ಕುಮಾರ್​ಗೆ ಇದು ಹೇಳಿ ಮಾಡಿಸಿದ ಸಿನಿಮಾ ಅಂತಿದ್ದಾರೆ ಸ್ಯಾಂಡಲ್​​​ವುಡ್​ ಮಂದಿ. ಯಾಕಂದ್ರೆ ಪುನೀತ್​ ಈ ಹಿಂದೆ ರಾಜಾಕುಮಾರ ಚಿತ್ರದಲ್ಲಿನ ಡಿಫರೆಂಟ್​ ರೋಲ್​ ಮಾಡಿ ಎಲ್ಲರು ಗಪ್​ ಚುಪ್​ ಆಗಿರುವಂತೆ ನಟಿಸಿದ್ದರು.

0

Leave a Reply

Your email address will not be published. Required fields are marked *