ಆಂಜನೇಯ ಸ್ವಾಮಿಗೆ ಉದ್ದಿನ ವಡೆ ಬಯಕೆಯಂತೆ

ತುಮಕೂರು: ಇಲ್ಲಿನ ಬಯಲು ಆಂಜನೇಯ ಸ್ವಾಮಿ ದೇವರಿಗೆ ಉದ್ದಿನ ವಡೆಯೆಂದರೆ ಬಲು ಇಷ್ಟವಂತೆ. ಹಾಗಾಗಿ ಧನುರ್ಮಾಸದ ಕಡೆಯ ಶನಿವಾರವಾದ ಇಂದು ಆಂಜನೇಯ ಸ್ವಾಮಿಗೆ ಉದ್ದಿನ ವಡೆಯ ಸೇವೆ ನಡೆದಿದೆ. ಆಂಜನೇಯ ಮೂರ್ತಿಗೆ 1300 ಉದ್ದಿನ ವಡೆಯಿರುವ ಹಾರ ತಯಾರಿಸಿ ಹಾಕಲಾಗಿದೆ. ಹರಕೆ ಹೊತ್ತ ಭಕ್ತಾದಿಗಳು ವ್ರತಾಚರಣೆ ಮಾಡಿ, ಮಡಿಯುಟ್ಟು ವಡೆ ತಯಾರಿಸಿ ರಾಮನ ಬಂಟನಿಗೆ ಸಲ್ಲಿಸಿದ್ದಾರೆ. ಇಂದು‌ ಪ್ರಾತಃ ಕಾಲದಿಂದಲೇ ಭಕ್ತಾಧಿಗಳು ದೇವಸ್ಥಾನಕ್ಕೆ ಬಂದು ಭಕ್ತಿಭಾವದಿಂದ ಸೇವೆ ಸಲ್ಲಿಸಿದ್ದಾರೆ. ವಡೆ ಸೇವೆ ಮಾಡಿದರೆ ಭಕ್ತಾದಿಗಳ ಇಷ್ಟಾರ್ಥಗಳು ನೆರವೇರುತ್ತದೆ ಎಂಬ ನಂಬಿಕೆ ಇಲ್ಲಿದೆ.

0

Leave a Reply

Your email address will not be published. Required fields are marked *