ಮಂಗಳನ ಅಂಗಳದಲ್ಲಿ ಪತ್ತೆಯಾಗಿವೆಯಂತೆ ಏಲಿಯನ್​ಗಳು

ಮಂಗಳನ ಅಂಗಳದಲ್ಲಿವೆಯಂತೆ ಏಲಿಯನ್​​ಗಳು
10 ನಿಮಿಷಗಳ ವೀಡಿಯೋದಲ್ಲಿದೆ ಅಚ್ಚರಿಯ ಮಾಹಿತಿ

ಏಲಿಯನ್ಸ್​ಗಳ ಕುರಿತು ಕಳೆದ ಒಂದು ದಶಕದಿಂದ ತೀವ್ರ ಕುತೂಹಲ ಇದೆ. ಇನ್ನು ಹಾರುವ ತಟ್ಟೆ ಹಿಂದೆ ಕೂಡ ಬಾಹ್ಯಾಕಾಶ ತಜ್ಞರು ಬಿದ್ದು ಬಹಳ ವರ್ಷಗಳೇ ಕಳೆದಿವೆ. ಇನ್ನು ಕೆಲವರು ಇವುಗಳನ್ನು ತಮ್ಮ ಕಣ್ಣಾರೆ ಕಂಡಿದ್ದೇವೆ ಅಂಥಾ ಹೇಳ್ಕೊಳ್ತಾರೆ. ಇದಕ್ಕೆ ನಿಜಕ್ಕೂ ಒಂದು ಟ್ವಿಸ್ಟ್ ಕೊಟ್ಟದ್ದು ಬಾಲಿವುಡ್ ನಟ ಅಮೀರ್ ಖಾನ್ ಅವರ ಪೀಕೆ ಚಿತ್ರ.

2014ರಲ್ಲಿ ಬಿಡುಗಡೆಯಾಗಿದ್ದ ಅಮೀರ್ ಖಾನ್ ನಟನೆಯ ಚಿತ್ರ ಪೀಕೆ. ಭಾರತದಲ್ಲಿ ಏಲಿಯನ್​ಗಳ ಕುರಿತು ಮತ್ತೊಂದು ರೀತಿಯ ಕುತೂಹಲ ಉಂಟಾಗಲು ಈ ಚಿತ್ರ ಕಾರಣವಾಗಿತ್ತು. ಈ ಚಿತ್ರದ ಪೀಕೆ ಪಾತ್ರ ದೇಶದಲ್ಲಿರುವ ಧರ್ಮ, ದೇವರುಗಳನ್ನು ಅರ್ಥ ಮಾಡ್ಕೊಳ್ಳೋದಕ್ಕೆ ಹೆಣಗಾಡ್ತಾನೆ. ಇನ್ನು ಅವನ ದಡ್ಡತನ, ಒಳ್ಳೆತನ ಮತ್ತು ಬುದ್ಧಿವಂತಿಕೆಗಳನ್ನೆಲ್ಲ ನೀವು ನೋಡಿರ್ತೀರಿ. ಜೊತೆಗೆ ಅವನನ್ನು ದೇಶದಲ್ಲಿ ಯಾರೂ ನಂಬದ ಸ್ಥಿತಿ ಮತ್ತು ಅವನು ಯಾರನ್ನೂ ನಂಬದ ಸ್ಥಿತಿ ಕೂಡ ನಿರ್ಮಾಣವಾಗಿರುತ್ತೆ. ಕಡೆಗೆ ಆತ ಜಗಜ್ಜನನಿಯ ಮೋಹಕ್ಕೂ ಬೀಳ್ತಾನೆ. ಆದರೆ, ಅವಳ ಆಯ್ಕೆ ಏನಾಗಿರುತ್ತೆ ಅಂಥಾ ನಿಮಗ್ಗೊತ್ತಿದೆ. ಆದರೆ, ಈ ಏಲಿಯನ್​ಗಳ ಕತೆಗೆ ಮತ್ತೊಂದು ಅಧ್ಯಾಯ ಸೇರ್ಕೊಂಡಿದೆ.

ಹಾರುವ ತಟ್ಟೆಗಳ ಕುರಿತು ಆಗೀಗ ದೇಶ – ವಿದೇಶಗಳಲ್ಲಿ ಕತೆಗಳು ಕೇಳಿಬರುತ್ಲೇ ಇರುತ್ವೆ. ಇನ್ನು ಏಲಿಯನ್​ಗಳ ಕುರಿತ ಕತೆಗಳು ಕೂಡ ಇದಕ್ಕಿಂತ ತೀರಾ ಏನೂ ಭಿನ್ನವಾಗಿರಲ್ಲ. ಈ ಕುರಿತು ಚರ್ಚೆಗೆ ಇದೀಗ ಪ್ರಮುಖ ತಿರುವೊಂದು ಸಿಕ್ಕಿದ್ದು, ಮಂಗಳನ ಅಂಗಳದಲ್ಲಿ ತ್ರಿಕೋನಾಕಾರದ ಅನುಮಾನಾಸ್ಪದ ಏಲಿಯನ್​ಗಳು ಪತ್ತೆಯಾಗಿವೆ ಎಂದು ”ಗುರುತಿಸಲಾಗದ ಹಾರುವ ತಟ್ಟೆಗಳ ಕುರಿತ ಸಂಶೋಧನೆ” ನಡೆಸುವ ಸಂಸ್ಥೆಯೊಂದು ವೀಡಿಯೋ ಒಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಅನೇಕ ಅಚ್ಚರಿಯ ಅಂಶಗಳು ಬೆಳಕಿಗೆ ಬಂದಿವೆ.

ಈ ಅಪರೂಪದ ವೀಡಿಯೋ ನೋಡಿದ ಏಲಿಯನ್ಸ್​​ಗಳ ಕುರಿತ ಕುತೂಹಲಿಗಳು ತುಂಬಾ ಖುಷಿಯಾಗಿದ್ದಾರೆ. ಇನ್ನು ಮಂಗಳ ಗ್ರಹ ಮಾತ್ರವಲ್ಲದೇ, ಚಂದ್ರನಂಥ ಉಪಗ್ರಹಗಳಲ್ಲಿ ಕೂಡ ಇಂಥ ಏಲಿಯನ್ಸ್​ಗಳು ಇರುವ ಕುರಿತು ಇನ್ನಷ್ಟು ಅಧ್ಯಯನ ನಡೆಸೋಕೆ ಇವರು ಮುಂದಾಗಿದಾರೆ. ಏಲಿಯನ್ಸ್​​ಗಳ ಅಧ್ಯಯನಕಾರರ ಪ್ರಕಾರ, ಇಂಥದ್ದೇ ವಾತಾವರಣದಲ್ಲಿ ಏಲಿಯನ್ಸ್​​ಗಳು ಇರುವ ಸಾಧ್ಯತೆ ಇದೆಯಂಥೆ.

ನಾಸಾ ಮತ್ತು ಇತರ ಬಾಹ್ಯಾಕಾಶ ಏಜೆನ್ಸಿಗಳು ಕೂಡ ಚಂದ್ರ ಮತ್ತು ಇತರ ಉಪಗ್ರಹಗಳಲ್ಲಿ ಅಸ್ತಿತ್ವದಲ್ಲಿ ಇರಬಹುದಾದ ಏಲಿಯನ್ಸ್​​ಗಳ ಕುರಿತು ಆಸಕ್ತಿ ತಾಳಿವೆ. ಒಂದು ವೇಳೆ ಭಾರತ ಮಂಗಳನ ಅಂಗಳಕ್ಕೆ ಕಳುಹಿಸಿರುವ ಮಾಮ್​ ಉಪಗ್ರಹದ ಕಣ್ಣಿಗೆ ಏನಾದರೂ ಈ ಏಲಿಯನ್ಸ್​​ಗಳು ಬೀಳುತ್ವಾ? ಅನ್ನೋ ಕುತೂಹಲ ಸದ್ಯಕ್ಕೆ ಭಾರತೀಯರಲ್ಲಿ ಕೂಡ ಮೂಡಿದೆ. ಒಂದ್ವೇಳೆ ಅವು ಮಾಮ್ ಕಣ್ಣಿಗೆ ಬಿದ್ದಲ್ಲಿ ದೇಶ ಮತ್ತೊಂದು ಸಾಧನೆ ಮಾಡಿದಂತಾಗುತ್ತೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

 

0

Leave a Reply

Your email address will not be published. Required fields are marked *