ಅಪಘಾತ: ಸ್ಥಳದಲ್ಲೇ ಮೂವರು ಸಾವು, ನಾಲ್ವರಿಗೆ ಗಾಯ

ಕೋಲಾರ: ಅಪ್ಪೆ ಆಟೋ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರಿಗೆ ಗಂಭೀರ ಗಾಯವಾಗಿದೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಗಾಜಲಬಾವಿ ಗ್ರಾಮದ ಬಳಿ ಘಟನೆ ನಡೆದಿದ್ದು, ಬಂಗಾರಪೇಟೆ ತಾಲ್ಲೂಕಿನ ಸುಣ್ಣಕುಪ್ಪಂ ಗ್ರಾಮದ ಭಾಸ್ಕರ್ (35), ಪಾರ್ವತಮ್ಮ (38), ಗೌರಮ್ಮ (34) ಸಾವನ್ನಪ್ಪಿರುವ ದುರ್ದೈವಿಗಳು, ಉಳಿದ ನಾಲ್ವರಿಗೆ ಗಾಯಗಳಾಗಿದ್ದು ಮುಳಬಾಗಿಲು ಹಾಗೂ ಕೋಲಾರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುಟುಂಬ ಸಮೇತರಾಗಿ ಮುಳಬಾಗಿಲು ಬಳಿಯ ಖಾದ್ರಿಪುರ ಶನಿಮಹಾತ್ಮ ದೇವಾಲಯಕ್ಕೆ ಹೋಗಿ ಬರುವಾಗ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

0

Leave a Reply

Your email address will not be published. Required fields are marked *