ಸುಪ್ರೀಂ ಕೋರ್ಟ್ ಆದೇಶ ಧಿಕ್ಕರಿಸಿ ನಡುವೆ ಆಧಾರ್ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ

ನವದೆಹಲಿ: ಪ್ರೋತ್ಸಾಹಧನದ ಸೀಮೆಎಣ್ಣೆ ಮತ್ತು ಅಟಲ್ ಪಿಂಚಣಿ ಯೋಜನೆಗೆ ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಸೌಕರ್ಯಗಳನ್ನು ಪಡೆಯಲು ಇನ್ನುಮುಂದೆ ಆಧಾರ್ ಕಾರ್ಡ್​​ ಮಾಹಿತಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ಸುಪ್ರೀಂ ಕೋರ್ಟ್​​​ ಆಧಾರ್ ಕಾರ್ಡ್​​ಅನ್ನು ಮುಲಭೂತ ವಿಷಯಗಳಿಗೆ ಸಂಬಂಧಿಸಿದಂತೆ ಕಡ್ಡಾಯಗೊಳಿಸಬಾರದು ಎಂಬ ಆದೇಶದ ನಡುವೆ ಕೂಡ ಕೇಂದ್ರ ಸರ್ಕಾರ ಹೊರಡಿಸಿರುವ ಈ ಆದೇಶ ಅಚ್ಚರಿ ಮೂಡಿಸಿದೆ. ​​​ಅಟಲ್ ಪಿಂಚಣಿ ಪಡೆಯಲು ಜೂನ್ 15 ಮತ್ತು ಪ್ರೋತ್ಸಾಹ ಧನದ ಸೀಮೆ ಎಣ್ಣೆ ಪಡೆಯಲು ಸೆಪ್ಟಂಬರ್ 30ರ ಒಳಗೆ ಆಧಾರ್ ಕಾರ್ಡ್​​ ಮಾಹಿತಿ ನೀಡಲು ಅಂತಿಮ ಗಡುವು ವಿಧಿಸಲಾಗಿದೆ. ಈ ಕುರಿತು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಇದುವರೆಗೆ ಪಡಿತರ ಚೀಟಿ, ಚಾಲನಾ ಪರವಾನಗಿ, ಮತದಾರರ ಚೀಟಿ, ರೈತರ ಪಾಸ್​​ಬುಕ್, ಉದ್ಯೋಗ ಕಾರ್ಡ್​​, ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮೊದಲಾದವುಗಳಿಗೆ ಆಧಾರ್ ಕಾರ್ಡ್​​ಅನ್ನು ಕಡ್ಡಾಯಗೊಳಿಸಲಾಗಿದೆ. ಇನ್ನು ಒಎನ್​ಜಿಸಿಯ ಪ್ರೋತ್ಸಾಹಧನ ಸ್ವೀಕರಿಸಲು ಕೂಡ ಆಧಾರ್ ಕಾರ್ಡ್​ ಕಡ್ಡಾಯವಾಗಿದೆ. ಈ ಮೂಲಕ ನೇರವಾಗಿ ಪ್ರೋತ್ಸಾಹಧನ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರಾಗಿ ವರ್ಗಾವಣೆಯಾಗುತ್ತದೆ.

ಆಧಾರ್ ಕಾಯ್ದೆ 2016ರ ಸೆಕ್ಷನ್ 7ಅನ್ನು ಉಲ್ಲೇಖಿಸಿ ಸೀಮೆ ಎಣ್ಣೆ ಮತ್ತು ಅಡಲ್ ಪಿಂಚಣಿ ಯೋಜನೆಗೆ ಆಧಾರ್ ಅನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಗೃಹಬಳಕೆಯ ಉದ್ದೇಶಕ್ಕಾಗಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಪ್ರೋತ್ಸಾಹಧನದ ಆಧಾರದ ಮೇಲೆ ಸೀಮೆ ಎಣ್ಣೆಯನ್ನು ವಿತರಿಸುತ್ತವೆ. ಅಟಲ್ ಪಿಂಚಣಿ ಯೋಜನೆಯಡಿ ನಾಗರಿಕರಿಗೆ ರೂ. 1,000 – 5,000ದವರೆಗೆ ಪಿಂಚಣಿ ಸೌಲಭ್ಯವನ್ನು ನೀಡಲಾಗುತ್ತಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *