ಆಧಾರ್ ಲಿಂಕ್ ಜೋಡಣೆ ಅವಧಿ ಮಾ. 31, 2018ರವರೆಗೆ ವಿಸ್ತರಣೆ

ನವದೆಹಲಿ: ಮೊಬೈಲ್ ಮತ್ತು ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಿಸಲು ಮಾರ್ಚ್ 31, 2018ರವರೆಗೆ ಅವಕಾಶ ನೀಡುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ನಲ್ಲಿ ಹೇಳಿಕೆ ನೀಡಿದೆ. ಈ ಮೂಲಕ ತನ್ನ ನಿರ್ಧಾರದಲ್ಲಿ ಅನಿಶ್ಚಿತತೆಯನ್ನು ಮುಂದುವರೆಸಿದೆ. ಈ ಹಿಂದಿನ ವಿಚಾರಣೆಯ ಅವಧಿಯಲ್ಲಿ ಫೆಬ್ರವರಿ 6, 2018ರಂದು ಅಂತಿಮ ಗಡುವು ನೀಡಿರುವುದಾಗಿ ಸರ್ಕಾರ ಹೇಳಿಕೊಂಡಿತ್ತು. ಆದರೆ, ಇಂದು ಸುಪ್ರೀಂ ಕೋರ್ಟ್​​ನ ತ್ರಿಸದಸ್ಯ ಪೀಠದ ಮುಂದೆ ಹಾಜರಾಗಿದ್ದ ಸರ್ಕಾರದ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್, ಸರ್ಕಾರ ಈ ಕುರಿತು ನಾಳೆ ಹೊಸ ಅಧಿಸೂಚನೆ ಹೊರಡಿಸಲಿದ್ದು, ಮಾರ್ಚ್ 31, 2018ರವರೆಗೆ ಆಧಾರ್ ಜೋಡಣೆಯ ಅವಧಿಯನ್ನು ವಿಸ್ತರಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದರೊಂದಿಗೆ ಇನ್ನಿತರ 139 ಸೇವೆಗಳಿಗೆ ಕೂಡ ಆಧಾರ್ ಜೋಡಣೆಗೆ ವಿನಾಯಿತಿ ನೀಡಲಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠದ ಮುಂದೆ ವೇಣುಗೋಪಾಲ್ ಹೇಳಿಕೆ ನೀಡಿದ್ದಾರೆ.

0

Leave a Reply

Your email address will not be published. Required fields are marked *