ಶೌಚಾಲಯದಲ್ಲಿ ಎಸೆದು ಹೋಗಿದ್ದ ಮಗು ರಕ್ಷಣೆ ಮಾಡಿದ ಬಾಲಕಿ

ಕೊಪ್ಪಳ: ನವಜಾತ ಗಂಡು ಶಿಶುವೊಂದನ್ನ ಸಾರ್ವಜನಿಕ ಶೌಚಾಲಯದಲ್ಲಿ ಎಸೆದು ಹೋಗಿರೋದನ್ನ ಶೌಚಕ್ಕೆ ಹೋದ ಬಾಲಕಿ ರಕ್ಷಣೆ ಮಾಡಿ ಮಾನವೀಯತೆ ಮೆರೆದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆ ಗಂಗಾವತಿಯ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಶಿಶು ಪತ್ತೆಯಾಗಿದೆ. ಬೆಳಿಗ್ಗೆ 6 ಗಂಟೆಗೆ ಗ್ರಾಮದ ಹೊರವಲಯದಲ್ಲಿರೋ ಸಾರ್ವಜನಿಕ ಶೌಚಾಲಯದಲ್ಲಿ ಶೌಚಕ್ಕೆ ಹೋದ ಭೀಮಾ ಎನ್ನುವ ಬಾಲಕಿ ಹುಲ್ಲಿನಲ್ಲಿ ಮುಚ್ಚಿಟ್ಟಿದ್ದ ನವಜಾತ ಶಿಶು ರಕ್ತ ಬರೋದನ್ನ ನೋಡಿದ್ದಾಳೆ. ಆಗ ಹುಲ್ಲು ತಗೆದು ನೋಡಿದ್ದಾಳೆ. ಅಲ್ಲಿ ಗಂಡು ನವಜಾತ ಶಿಶು ಪತ್ತೆಯಾಗಿದೆ. ಶಿಶುವನ್ನ ವೇಲ್​ನಲ್ಲಿ ಹಾಕಿಕೊಂಡು ಮನೆಗೆ ತಂದು ರಕ್ಷಣೆ ಮಾಡಿದ್ದಾಳೆ. ಬಳಿಕ ಮಕ್ಕಳ ರಕ್ಷಣಾ ಘಟಕದ ಸಾಮಾಜಿಕ ಕಾರ್ಯಕರ್ತೆಯರಿಗೆ ತಿಳಿಸಿದ್ದಾಳೆ. ಗಂಗಾವತಿ ತಾಲೂಕು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದ್ದು. ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಶಿಶುವನ್ನ ನಾವೇ ಜೋಪಾನ ಮಾಡ್ತೀವಿ ಅಂತಿದ್ದಾರೆ ಭೀಮಾ ಬಾಲಕಿ. ಇನ್ನು ನವಜಾತ ಶಿಶು ಶೌಚಾಲಯದಲ್ಲಿ ಯಾಕೆ ತಂದು ಹಾಕಿದ್ದಾರೆ ಅನ್ನೋದು ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ.

ರಾಚಪ್ಪ ಬನ್ನಿದಿನ್ನಿ, ಸುದ್ದಿ ಟಿವಿ, ಕೊಪ್ಪಳ.

0

Leave a Reply

Your email address will not be published. Required fields are marked *