ನವದೆಹಲಿ: ಲಕ್ನೋ ತಂಡದ ವಿರುದ್ದ 98 ರನ್ ಗಳ ಬೃಹತ್ ಜಯ ಗಳಿಸಿರುವ ಕೋಲ್ಕತ್ತ ತಂಡ ಅಂಕಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದೆ.
ಪ್ಲೇ ಆಫ್ ಗೆ ಪ್ರವೇಶ ಪಡೆಯುವುದಕ್ಕೆ ಪೈಪೋಟಿ ತೀವ್ರಗೊಂಡಿದ್ದು, ಲಖನೌ ತಂಡವನ್ನು 98 ರನ್ ಗಳಿಂದ ಮಣಿಸಿದ ಕೆಕೆಆರ್ ಗೆದ್ದಿದೆ.
16 ಅಂಕಗಳೊಂದಿಗೆ ಕೆಕೆಆರ್ ಮೊದಲ ಸ್ಥಾನಕ್ಕೆ ಏರಿದೆ. ಲಕ್ನೋ 5ನೇ ಸ್ಥಾನಕ್ಕೆ ಕುಸಿದಿದ್ದರೆ, ಪಂಜಾಬ್ ವಿರುದ್ಧ 28 ರನ್ ಅಂತರದ ಗೆಲುವು ಸಾಧಿಸಿದ ಹಾಲಿ ಚಾಂಪಿಯನ್ ಚೆನ್ನೈ 5ರಿಂದ 3ನೇ ಸ್ಥಾನಕ್ಕೇರಿದೆ. ಪಂಜಾಬ್ 8ನೇ ಸ್ಥಾನದಲ್ಲಿದೆ.
