ಮುಂಬೈ ತಂಡದಲ್ಲಿ ಸ್ಥಿರತೆ ಕಂಡುಬರುತ್ತಿಲ್ಲ. ಭಾರತ ತಂಡದ ನಾಯಕ ಮತ್ತು ಉಪನಾಯಕ ಇಬ್ಬರೂ ಈ ತಂಡದಲ್ಲಿದ್ದಾರೆ. ಅದರೆ ಬಹಳ ಸಂದರ್ಭದಲ್ಲಿ ಜಯ ಗಗನ ಕುಸುಮ, ನಿನ್ನೆ ಕೂಡ ಹಾಗೇ ಆಯಿತು.
ಲಖನೌ ನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಲಖನೌ ತಂಡ 4 ವಿಕೆಟ್ ಗಳ ಜಯ ಗಳಿಸಿದೆ.
: ಟಾಸ್ ಗೆದ್ದ ಲಖನೌ ಸೂಪರ್ ಜೈಂಟ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರಿಂದ ಮುಂಬೈ ಇಂಡಿಯನ್ಸ್ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಗಳ ನಷ್ಟಕ್ಕೆ 144 ರನ್ ಗಳಿಸಿತು. ಈ ೧೪೪ ರನ್ ಗೆಲುವುಗೆ ಸಾಕಾಗಲಿಲ್ಲ.
ಲಖನೌ ತಂಡದ ಬೌಲರ್ ಗಳು ಆರಂಭದಿಂದಲೂ ಮುಂಬೈ ತಂಡ ರನ್ ಗಳಿಸಲು ಅವಕಾಶ ನೀಡಲಿಲ್ಲ. . ಆರಂಭದಲ್ಲೇ ಮುಂಬೈ ವಿಕೆಟ್ ಗಳು ಉರುಳತೊಡಗಿದವು.
ರನ್ ಚೇಸಿಂಗ್ ನಲ್ಲಿ ಮಾರ್ಕಸ್ ಸ್ಟೋನಿಸ್ ಮತ್ತೊಮ್ಮೆ ಲಖನೌ ಸೂಪರ್ ಜೈಂಟ್ಸ್ ಪರ ಪ್ರಮುಖ ಪಾತ್ರವಹಿಸಿದರು. ಬ್ಯಾಟಿಂಗ್ ನಲ್ಲಿ 62 ರನ್ ಮತ್ತು ಬೌಲಿಂಗ್ ನಲ್ಲಿ 19 ರನ್ಗಳಿಗೆ 3 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಲಖನೌ ಸೂಪರ್ ಜೈಂಟ್ಸ್ ತಂಡದ ಬೌಲರ್ಗಳು ಅಸಾಧಾರಣ ಪ್ರದರ್ಶನವನ್ನು ಪ್ರದರ್ಶಿಸಿದರು. ಮೊದಲ 6 ಓವರ್ಗಳಲ್ಲಿ ಪಂದ್ಯದ ನಿಯಂತ್ರಿಸಿ ಮುಂಬೈ ತಂಡದ ಮೇಲೆ ಒತ್ತಡ ಹೇರಿದರು.
ಈ ನಿರ್ಣಾಯಕ ಗೆಲುವಿನ ಪರಿಣಾಮ ಲಖನೌ ಸೂಪರ್ ಜೈಂಟ್ಸ್ ತಂಡ 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ. ಮುಂಬೈ ತಂಡ 6 ಅಂಕಗಳನ್ನು ಹೊಂದಿದ್ದು 10 ನೇ ಸ್ಥಾನದಲ್ಲಿದೆ.
