ಬೆಂಗಳೂರು : ನಮ್ಮದು ಗ್ಯಾರಂಟಿ. ಬಿಜೆಪಿಯದು ಬರೀ ಚೊಂಬು..! ರಾಜ್ಯ ಕಾಂಗ್ರೆಸ್ ನ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ್ ಅವರ ಮಾತಿದು.
ಶಿವಮೊಗ್ಗ ಚಿತ್ರದುರ್ಗ ಸೇರಿದಂತೆ ಹಲವೆಡೆ ಚುನಾವಣಾ ಸಭೆಗಳಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ವಿಚಾರವನ್ನು ಪ್ರಸ್ತಾಪಿಸಿದರು.
ರಾಜ್ಯ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ನಾವು ಗ್ಯಾರಂಟಿ ಆಶ್ವಾಸನೆ ನೀಡಿದಾಗ ಬಿಜೆಪಿಯವರು ಲೇವಡಿ ಮಾಡಿದರು. ಆದರೆ ಈಗ ಮೋದಿಯವರೂ ಗ್ಯಾರಂಟಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಸುಳ್ಳು ಹೇಳು ಮತ್ತಷ್ಟು ಸುಳ್ಳು ಮತ್ತೆ ಮತ್ತೆ ಸುಳ್ಳು ಹೇಳು ಎಂಬುದರ ಮೇಲೆ ಬಿಜೆಪಿ ಸಂಸದರಿಗೆ ನಂಬಿಕೆ. ಹೀಗಾಗಿ ಅವರು ಸದಾ ಸುಳ್ಳು ಹೇಳುತ್ತ ಕರ್ನಾಟಕದ ಜನರಿಗೆ ಚೊಂಬು ನೀಡಿದ್ದಾರೆ ಎಂದು ಅವರು ಹೇಳಿದರು.







