ನವದೆಹಲಿ : ಜಗತ್ತಿನ ಅತಿ ಹಿರಿಯ ಈ ವ್ಯಕ್ತಿ. ಹಿರಿಯಜ್ಜ. ಇವರಿಗೆ ಅತಿ ಹೆಚ್ಚು ವಯಸ್ಸು. ಅಧಿಕೃತ ದಾಖಲೆಯ ಪ್ರಕಾರ ಇವರಿಗೆ 111 ವರ್ಷ. ಇವರು ಹುಟ್ಟಿದ್ದು 1912 ಆಗಸ್ಟ್ 26 ರಂದು. ಟೈಟಾನಿಕ್ ಹಡಗು ಮುಳುಗಿದ್ದು ಗೊತ್ತಲ್ಲ ? ಈ ಹಡಗು ಮುಳುಗಿದ ಸ್ವಲ್ಪ ಕಾಲದಲ್ಲೇ ಇವರು ಹುಟ್ಟಿದ್ದು.
ಇವರ ಹೆಸರು ಜಾನ್ ಅಲ್ಫ್ರೇಡ್ ಟಿನ್ನೀಸ್ ಉಡ್. ಇವರು ಬ್ರಿಟೀಶ್ ಸೈನ್ಯದಲ್ಲಿ ಕೆಲಸ ಮಾಡಿದವರು. ಎರಡೂ ವಿಶ್ವ ಯುದ್ಧವನ್ನು ನೋಡಿದವರು.

ಈ ದೀರ್ಘಾಯಶಿಯ ಗುಟ್ಟೇನು ? ಇಷ್ಟು ವರ್ಷ ಅವರು ಬದುಕಿದ್ದು ಹೇಗೆ ? ಈ ಪ್ರಶ್ನೆಯನ್ನು ಹಲವಾರು ಜನ ಅವರನ್ನು ಕೇಳಿದ್ದಾರೆ. ಅವರು ನಗುತ್ತಲೇ ಉತ್ತರ ನೀಡಿದ್ದಾರೆ. ನೀವು ಕೇಳಿದರೂ ಇದೇ ಉತ್ತರ ನೀಡಿಯಾರು.

ಅವರ ಪ್ರಕಾರ ಅವರ ಆರೋಗ್ಯದ ಗುಟ್ಟು ಮೀನು ಮತ್ತು ಚಿಪ್ಸ್.. ಹೌದು ಮೀನು ಮತ್ತು ಚಿಪ್ಸ್. ಜೊತೆಗೆ ಅವರು ಇನ್ನೊಂದು ಮಾತನ್ನು ಹೇಳುತ್ತಾರೆ ಜೊತೆಗೆ ಲಕ್ ಅಥವಾ ಅದೃಷ್ಟ..!

ಸಮಯದ ಜೊತೆ ಮುಖಾಮುಖಿಯಾಗುವುದು ಮತ್ತು ಸಮಯ ಬಯಸಿದ ಹಾಗೆ ಬದಲಾಗುವುದು ಸಹ ನನ್ನ ದೀರ್ಘಾಯುಷ್ಯದ ಗುಟ್ಟು ಎನ್ನುತ್ತಾರೆ ಅವರು

Author

Leave a Reply

Your email address will not be published. Required fields are marked *