Abhishek Ambareesh: ಅಭಿಷೇಕ್ ಮನೆಯಲ್ಲಿ ಸಡಗರ.. ಸಂಭ್ರಮ : ಗಂಡು ಮಗುವಿಗೆ ಜನ್ಮ ನೀಡಿದ ಅವಿವಾ

Abhishek Ambareesh Become Parents: ಮೊಮ್ಮಗನನ್ನು ನೋಡಿ ಮಾಜಿ ಸಂಸದೆ ಸುಮಲತಾ ಅಂಬರೀಶ್ ತುಂಬಾನೇ ಖುಷಿಯಾಗಿದ್ದಾರೆ. ಮಗುವನ್ನು ಎತ್ತಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ.

ರೆಬೆಲ್ ಸ್ಟಾರ್ ಅಂಬರೀಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಇಂದು ಬೆಳಗ್ಗೆ ಅವಿವಾ ಬಿದ್ದಪ್ಪ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದು, ಅಭಿಮಾನಿಗಳ ಸಂತಸ ಹೆಚ್ಚಿಸಿದೆ. ಮತ್ತೆ ಜೂನಿಯರ್ ಅಂಬರೀಶ್ ಹುಟ್ಟಿ ಬಂದರು ಎಂದೇ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಸದ್ಯ ತಾಯಿ ಮಗು ಆಸ್ಪತ್ರೆಯಲ್ಲಿಯೇ ಇದ್ದು, ಸುಮಲತಾ ಮಗು ಎತ್ತಿಕೊಂಡ ಫೋಟೋ ವೈರಲ್ ಆಗುತ್ತಿದೆ.

ಅಂಬರೀಶ್ ಅವರ ಸಮಾಧಿ ಬಳಿ ಪೂಜೆ ಸಲ್ಲಿಸಲು ಬಂದಾಗಲೇ ಅವಿವಾ ಗರ್ಭಿಣಿ ಎಂಬುದು ಎಲ್ಲರಿಗೂ ಅನುಮಾನ ಬಂದಿತ್ತು. ಆದರೆ ಸುಮಲತಾ ಆ ಬಗ್ಗೆ ಏನು ಹೇಳಿರಲಿಲ್ಲ. ಬಳಿಕ ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮವನ್ನು ಮಾಡಿದರು. ಈಗ ಮನೆಗೆ ಗಂಡು ಮಗು ಬಂದಿದ್ದಾರೆ. ಅಂಬರೀಶ್ ಅವರೇ ಮತ್ತೆ ಹುಟ್ಟಿ ಬಂದರೆಂಬ ಖುಷಿ ಎಲ್ಲರೊಳಗೂ ಇದೆ.

ಅವಿವಾ ಹಾಗೂ ಅಭಿಷೇಕ್ ಲವ್ ಮಾಡಿ ಮದುವೆಯಾದವರು. ಅವಿವಾ ಫ್ಯಾಷನ್ ಲೋಕದ ದಿಗ್ಗಜ ಪ್ರಸಾದ್ ಬಿದ್ದಪ ಅವರ ಪುತ್ರಿ. ಈಗ ಗಂಡು ಮಗುವಿಗೆ ಜನ್ಮ ನೀಡಿದ್ದು, ಅಂಬಿ ಮನೆಯಲ್ಲಿ ಸಂಭ್ರಮ ಕಳೆಗಟ್ಟಿದೆ. ಮೊಮ್ಮಗನನ್ನು ನೋಡಿ ಮಾಜಿ ಸಂಸದೆ ಸುಮಲತಾ ಅಂಬರೀಶ್ ತುಂಬಾನೇ ಖುಷಿಯಾಗಿದ್ದಾರೆ. ಮಗುವನ್ನು ಎತ್ತಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾ ತುಂಬೆಲ್ಲಾ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ.

https://twitter.com/iamyogitharj/status/1856194713033875911

ಅಭಿಮಾನಿಗಳಂತು ಮನತುಂಬಿ ಹಾರೈಸುತ್ತಿದ್ದಾರೆ. ಮತ್ತೆ ನಮ್ಮ ಮಂಡ್ಯದ ಗಂಡು ಅಂಬರೀಶ್ ಅವರೇ ಹುಟ್ಟಿ ಬಂದಿರಬೇಕೆಂದು ಹೇಳುತ್ತಿದ್ದಾರೆ. ಸದ್ತ ತಾಯಿ ಮಗು ಆರೋಗ್ಯವಾಗಿದ್ದು, ಮಗು ಮುದ್ದಾಗಿದೆ ಎಂಬ ಕಮೆಂಟ್ ಗಳ ಸುರಿಮಳೆ ಸುರಿಯುತ್ತಿದೆ.

Author

error: