ನೇಪಾಳದ ಗಡಿಯಲ್ಲಿ ಜವರಾಯ ಅಟ್ಟಹಾಸ ಮೆರೆಯುತ್ತಿದ್ದಾನೆ. ಟಿಬೆಟ್​ನಲ್ಲಿ ಕ್ಷಣ ಕ್ಷಣಕ್ಕೂ  ಸಾವಿನ ಸಂಖ್ಯೆ ಏರುತ್ತಿದೆ. ಟಿಬೆಟ್​ನಲ್ಲಿ ಉಂಟಾದ ಭೂಕಂಪನದಲ್ಲಿ 95ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 132ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ರಿಕ್ಟರ್ ಮಾಪಕದಲ್ಲಿ ಸುಮಾರು 7.1 ತೀವ್ರತೆ ದಾಖಲಾಗಿದೆ. ಭೀಕರ ಭೂಕಂಪನಕ್ಕೆ ಭಾರತದ ಹಲವು ರಾಜ್ಯಗಳಲ್ಲಿ ಬಿಹಾರ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿಯೂ ಕೂಡ ಭೂಮಿ ಕಂಪಿಸಿದೆ

ಶಿಗೇಟ್ಸ್​ ನಗರದ ಟಿಂಗ್ರಿಯನ್ನು ಭೂಕಂಪನದ ಕೇಂದ್ರವಾಗಿದೆ.. ಇದು ಟಿಬೆಟ್​ನ ರಾಜಧಾನಿ ಲ್ಹಾಸಾದಿಂದ ಸುಮಾರು 400 ಕಿಲೋ ಮೀಟರ್ ದೂರದಲ್ಲಿದೆ. ನೇಪಾಳದ ಗಡಿಯೊಂದಿಗೆ ಹೊಂದಿಕೊಂಡಿರುವ ಈ ಪ್ರದೇಶ ಮೌಂಟ್ ಎವರೆಸ್ಟ್​ ಪ್ರವಾಸಕ್ಕೆ ಬರುವವರ ಟೂರಿಸಂ ಹಬ್ ಆಗಿದೆ.

ಬೆಳಗ್ಗೆ 6.35 ರ ಸುಮಾರಿಗೆ ಭೂಕಂಪನ ಉಂಟಾಗಿದೆ. ಒಟ್ಟು 3 ಬಾರಿ ಭೂಮಿ ಕಂಪಿಸಿದ್ದು, ಮೊದಲ ಭೂಕಂಪನ ಆದ ಕೆಲವೇ ನಿಮಿಷಗಳಲ್ಲಿ ಎರಡನೇ ಬಾರಿ ಭೂಮಿ ಕಂಪಿಸಿದೆ ಎಂದು ವರದಿಯಾಗಿದೆ.

2ನೇ ಭೂಕಂಪನ ಬೆಳಗ್ಗೆ 7.02 ನಿಮಿಷಕ್ಕೆ ಆಗಿದ್ದು ಅದರ ತೀವ್ರತೆ 4.7 ರಿಕ್ಟರ್​ ಮಾಪನದಷ್ಟಿತ್ತು. ನಂತರ 7.07 ನಿಮಿಷಕ್ಕೆ ಭೂಮಿ 3ನೇ ಬಾರಿ ಕಂಪಿಸಿದ್ದು, ಆಗ ಸುಮಾರು 4.9 ರಿಕ್ಟರ್ ಮಾಪಕ ಭೂಕಂಪ ದಾಖಲಾಗಿದೆ. ಈ ಭೂಕಂಪದ ತೀವ್ರತೆಗೆ 95 ಜನರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

Author

Leave a Reply

Your email address will not be published. Required fields are marked *