ಕಾಶ್ಮೀರದಲ್ಲಿ ಹಿಜ್ಬುಲ್, ಲಷ್ಕರ್​​​ನ 5 ಭಯೋತ್ಪಾದಕರ ಹತ್ಯೆ

ಶ್ರೀನಗರ: ಕುಲ್ಗಾಮ್​ನ ಚೌಗಾಮ್​​ನಲ್ಲಿ ಸೇನೆ ಮತ್ತು ಭಯೋತ್ಪಾದಕರು ನಡುವೆ ಮುಖಾಮುಖಿಯಾಗಿದ್ದು 5 ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ. ಬಾರಾಮುಲ್ಲಾ ಮತ್ತು ಖಾಜಿಂಗುಂದ್​​ ರೈಲು ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದ್ದು, ಉಗ್ರರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಪೊಲೀಸರು ಉಗ್ರರಿಗಾಗಿ ಚೌಗಾಮ್​​ನಲ್ಲಿ ನಡೆಸುತ್ತಿರುವ ಶೋಧ ಕಾರ್ಯಕ್ಕೆ ಸೇನೆ ಕೂಡ ಸಾಥ್ ನೀಡಿದೆ.

ಲಷ್ಕರ್ ಇ ತೊಯ್ಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ 5 ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ ಎಂದು ಕಾಶ್ಮೀರದ ಐಜಿಪಿ ಎಸ್ ಪಿ ಪನಿ ಹೇಳಿದ್ದಾರೆ. ಹತ್ಯೆಯಾದವರು ನಾಗರಿಕರ ಮೇಲೆ ದೌರ್ಜನ್ಯ ನಡೆಸಿದ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಭದ್ರತಾ ಪಡೆಗಳ ಮೇಲೆ ದಾಳಿ ಮತ್ತು ಬ್ಯಾಂಕ್ ಲೂಟಿ ಮಾಡಿದ್ದ ಪ್ರಕರಣಗಳಲ್ಲಿ ಬೇಕಾಗಿದ್ದರು. ಇವರಿಂದ ಕೆಲವು ಶಸ್ತ್ರಾಸ್ತ್ರಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದ್ದು, ಶೋಧಕಾರ್ಯ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.

0

Leave a Reply

Your email address will not be published. Required fields are marked *