ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಪ್ರಕಟ: ಕಾಂಗ್ರೆಸ್, ಬಿಜೆಪಿ ಪರಿಸ್ಥಿತಿ ಏನು?

ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಪ್ರಕಟ

ಬಿಜೆಪಿ ರಾಜ್ಯದಲ್ಲಿ ಕಾಂಗ್ರೆಸ್ ರಾಜ್ಯಭಾರದ ನಿರೀಕ್ಷೆ

ಆಡಳಿತಾರೂಢ ಬಿಜೆಪಿಗೆ ಹಿನ್ನಡೆ ಸಾಧ್ಯತೆ

ಮಂಕಾಯಿತೆ ಪ್ರಧಾನಿ ನರೇಂದ್ರ ಮೋದಿ ಹವಾ?

ಕಾಂಗ್ರೆಸ್ ಭವಿಷ್ಯಕ್ಕೆ ನೀರೆರೆಯಲಿದೆಯೇ ಅಂತಿಮ ಫಲಿತಾಂಶ?

ಕಾಂಗ್ರೆಸ್ಸೇತರ ಮಹಾಮೈತ್ರಿ ಆಲೋಚನೆಯ ಕತೆ ಏನು?

ದೆಹಲಿ: ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಪಂಚ ರಾಜ್ಯಗಳ ಚುನಾವಣೆ ಮುಕ್ತಾಯವಾಗಿದ್ದು, ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ. ರಾಜಸ್ಥಾನದಲ್ಲಿ ಬಹುತೇಕ ಕಾಂಗ್ರೆಸ್​ ಗೆಲ್ಲುವ ಸಾಧ್ಯತೆ ಇದೆ  ಎಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಬಹುತೇಕ ಸಮೀಕ್ಷಗಳ ಪ್ರಕಾರ ತೆಲಂಗಾಣದಲ್ಲಿ ಟಿಆರ್​ಎಸ್​ ಅಧಿಕಾರಕ್ಕೆ ಬರಲಿದ್ದು, ಕಾಂಗ್ರೆಸ್​ ನೇತೃತ್ವದ ಮೈತ್ರಿಕೂಟ ವಿಪಕ್ಷದ ಸ್ಥಾನವನ್ನು ಅಲಂಕರಿಸಲಿದೆ.

ಇದರೊಂದಿಗೆ ಮಧ್ಯಪ್ರದೇಶದಲ್ಲಿ ಕೂಡ ಕಾಂಗ್ರೆಸ್​ ಪರ ಅಲೆ ಕಂಡು ಬಂದಿದೆ ಎಂದು ಸಮೀಕ್ಷೆಗಳು ಅಭಿಪ್ರಾಯಪಟ್ಟಿವೆ. ಅಲ್ಲದೇ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೆಕ್​ ಟು ನೆಕ್ ಫೈಟ್ ಕಂಡುಬರುವ ಸಾಧ್ಯತೆಗಳು ಕಂಡುಬಂದಿವೆ. ಇವೆಲ್ಲದರ ನಡುವೆ ಛತ್ತೀಸ್​ಘಡದಲ್ಲಿ ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಒಟ್ಟಿನಲ್ಲಿ 2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಪಂಚ ರಾಜ್ಯಗಳ ಚುನಾವಣೆಗಳ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಆಡಳಿತದಲ್ಲಿರುವ ಮೂರು ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್​ಘಢ ರಾಜ್ಯಗಳಲ್ಲಿ ಕಾಂಗ್ರೆಸ್ ಸ್ಪಷ್ಟವಾಗಿ ಮೇಲುಗೈ ಸಾಧಿಸಿದೆ. ಇದರೊಂದಿಗೆ ಇಷ್ಟು ದಿನಗಳ ಕಾಲ ನೆಮ್ಮದಿಯಾಗಿದ್ದ ಬಿಜೆಪಿಯನ್ನು ಚಿಂತೆಗೀಡು ಮಾಡಿದ್ದು, ಇದೇ ತಿಂಗಳ ಡಿಸೆಂಬರ್ 11ರಂದು ಮಧ್ಯಾಹ್ನ 10ರ ಹೊತ್ತಿಗೆ ಅಂತಿಮ ಫಲಿತಾಂಶದ ಕುರಿತ ಖಚಿತ ಮಾಹಿತಿ ಲಭ್ಯವಾಗಲಿದೆ.

ಪಂಚ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ:

ರಾಜಸ್ಥಾನದಲ್ಲಿ ಅಧಿಕಾರದತ್ತ ಕಾಂಗ್ರೆಸ್ 

ಇಂಡಿಯಾ ಟುಡೆ ಸಮೀಕ್ಷೆ

ಕಾಂಗ್ರೆಸ್                  142

ಬಿಜೆಪಿ                        56

ಇತರ                        02

ಜನ್​​ಕೀ ಬಾತ್ ಸಮೀಕ್ಷೆ

ಬಿಜೆಪಿ –     83 – 103

ಕಾಂಗ್ರೆಸ್​​   81 – 101

ಇತರರು           15

ಟೈಮ್ಸ್ನೌಮತದಾನೋತ್ತರ ಸಮೀಕ್ಷೆ

ಕಾಂಗ್ರೆಸ್​  –  105

ಬಿಜೆಪಿ           85

ಬಿಎಸ್​ಪಿ –     02

ಇತರರು        07
ಒಟ್ಟು ಕ್ಷೇತ್ರಗಳು 200

ಬಹುಮತಕ್ಕೆ ಅಗತ್ಯ ಕ್ಷೇತ್ರಗಳು 101

ಮಧ್ಯಪ್ರದೇಶ ಮತದಾನೋತ್ತರ ಚುನಾವಣಾ ಸಮೀಕ್ಷೆ

ಇಂಡಿಯಾ ಟುಡೆ ಸಮೀಕ್ಷೆ  

ಕಾಂಗ್ರೆಸ್​​​  104 – 122

ಬಿಜೆಪಿ      102 – 120

ಬಿಎಸ್​ಪಿ       1-3

ಇತರರು       3- 8

ಟೈಮ್ಸ್ ನೌ ಸಮೀಕ್ಷೆ

ಬಿಜೆಪಿ          126

ಕಾಂಗ್ರೆಸ್​       89

ಬಿಎಸ್​​ಪಿ       06

ಇತರರು        09

ಸಿ ವೋಟರ್​ 

ಕಾಂಗ್ರೆಸ್​   110 – 127

ಬಿಜೆಪಿ        90 – 106

ಇತರರು     06 –  28

ಜನ್ಕೀ ಬಾತ್​ 

ಕಾಂಗ್ರೆಸ್ –  95 -115

ಬಿಜೆಪಿ    – 108 -128

ಒಟ್ಟು ವಿಧಾನಸಭೆ ಕ್ಷೇತ್ರಗಳು – 203

ಬಹುಮತಕ್ಕೆ ಬೇಕಾದ ಸದಸ್ಯ ಬಲ  -116

ಛತ್ತೀಸ್ಗಢ ಚುನಾವಣೋತ್ತರ ಸಮೀಕ್ಷೆ

ಇಂಡಿಯಾ ಟುಡೆ

ಬಿಜೆಪಿ                 42- 50

ಕಾಂಗ್ರೆಸ್​​             32- 38

ಜನತಾ ಕಾಂಗ್ರೆಸ್​    6- 8

ಇತರರ                  1- 3

ಒಟ್ಟು ವಿಧಾನಸಭೆ ಕ್ಷೇತ್ರಗಳು – 91

ಬಹುಮತ – 42

ತೆಲಂಗಾಣದ ಚುನಾವಣೋತ್ತರ ಸಮೀಕ್ಷೆ 

ಜನ್ಕೀ ಬಾತ್​  

ಟಿಆರ್​ಎಸ್​​     50 -65

ಕಾಂಗ್ರೆಸ್​         38 – 42

ಬಿಜೆಪಿ             04- 07

ಒಟ್ಟು ವಿಧಾನಸಭೆ ಕ್ಷೇತ್ರಗಳು

ಒಟ್ಟು ವಿಧಾನಸಭೆ ಕ್ಷೇತ್ರಗಳು – 119

ಬಹುಮತ – 60

ಇನ್ನು ಉತ್ತರದ ರಾಜ್ಯಗಳಲ್ಲಿ ಕಾಂಗ್ರೆಸ್ಸೇತರ ಶಕ್ತಿಗಳು ಕಾಂಗ್ರೆಸ್ ಪಕ್ಷವನ್ನು ದೂರ ಇಟ್ಟು ತಮ್ಮ ಬಲಾಬಲವನ್ನು ಪರೀಕ್ಷಿಸಿಕೊಳ್ಳಲು ಮುಂದಾಗಿದ್ದವು. ಅದರಲ್ಲೂ ಮುಖ್ಯವಾಗಿ ಮಾಯಾವತಿ ನೇತೃತ್ವದ ಬಿಎಸ್​​ಪಿ, ಅಖಿಲೇಶ್ ಯಾದವ್ ನೇತೃತ್ವದ ಎಸ್​​ಪಿ ಮತ್ತು ಅಜಿತ್ ಜೋಗಿ ನೇತೃತ್ವದ ಛತ್ತೀಸ್​ಗಢ ಜನತಾ ಕಾಂಗ್ರೆಸ್ ಪಕ್ಷಗಳಿಗೆ ನಿರೀಕ್ಷಿತ ಬೆಂಬಲ ಸಿಗುವುದಿಲ್ಲ ಎಂದು ಇಂದಿನ ಚುನಾವಣೋತ್ತರ ಸಮೀಕ್ಷೆಗಳು ಅಭಿಪ್ರಾಯಪಟ್ಟಿವೆ. ಇಂದಿನ ಚುನಾವಣೋತ್ತರ ಸಮೀಕ್ಷೆಗಳು ಅಂತಿಮ ಫಲಿತಾಂಶದಲ್ಲಿ ನಿಜವಾದಲ್ಲಿ ಕಾಂಗ್ರೆಸ್ಸೇತರವಾಗಿ ವಿಪಕ್ಷಗಳು ಒಗ್ಗೂಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹೋರಾಡುವ ಚಿಂತನೆಗಳ ಕುರಿತು ಮರು ಆಲೋಚಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *