ಅದೊಂದು ಭಾವುಕ ಕ್ಷಣ. ಇಬ್ಬರೂ ಖ್ಯಾತ ನಾಮರು. ಸೆಲಿಬ್ರಿಟೀಸ್. ಆದರೆ ಭಾವ ಜೀವಿಗಳೂಸಹ.
ನಿನ್ನೆ ವೈಜಾಗ್ ನಲ್ಲಿ ನಡೆದ ಐಪಿಎಲ್ ಪಂದ್ಯದ ಸಂದರ್ಭ ಈ ಅಪರೂಪದ ಕ್ಷಣಕ್ಕೆ ಸಾಕ್ಶಿಯಾಯಿತು.

ಪಂದ್ಯ ನಡೆದಿದ್ದು ಕೊಲಕತ್ತಾ ಮತ್ತು ದೆಹಲಿ ತಂಡಗಳ ನಡುವೆ. ಈ ಪಂದ್ಯದಲ್ಲಿ ದೆಹಲಿ ತಂಡ ಕೊಲಕತ್ತಾ ವಿರುದ್ಧ ೧೦೬ ರನ್ ಗಳ ಸೋಲು ಅನುಭವಿಸಿತು.
ದೆಹಲಿ ತಂಡದ ನಾಯಕ ರಿಷಬ್ ಪಂತ್. ಅವರು ಅಪಘಾತದ ಕಾರಣ ಸುಮಾರು ಒಂದು ವರ್ಷ ಕ್ರಿಕೆಟ್ ನಿಂದ ದೂರವಿದ್ದರು. ಅವರು ಬದುಕಿ ಉಳಿದಿದ್ದೇ ಪವಾಡ.
ಹೀಗೆ ಪವಾಡ ಸದೃಶ್ಯವಾಗಿ ಬದುಕಿ ಬಂದ ಪಂತ್ ಈ ಸೀಸನ್ ನಲ್ಲಿ ಐಪಿಎಲ್ ಆಡಲು ಮೈದನಕ್ಕೆ ಇಳಿದಿದ್ದರು.
ಇವರನ್ನು ನೋಡುವುದಕ್ಕೆ, ಪ್ರೀತಿಯಿಂದ ಅಪ್ಪಿಕೊಳ್ಳುವುದಕ್ಕೆ ಒನ್ನೊಬ್ಬರು ಕಾಯುತ್ತಿದ್ದರು. ಅವರೂ ಸಹ ದೊಡ್ಡ ಸೆಲಿಬ್ರಿಟಿ. ಕೊಲಕತ್ತಾ ತಂಡದ ಮಾಲಿಕ ಶಾರೂಖ್ ಖಾನ್.
ಸೋಲಿನ ಬೇಸರದಿಂದ ಹೆಜ್ಜೆ ಹಾಕುತ್ತಿದ್ದ ರಿಷಭ್ ರನ್ನು ಎಳೆದು ಅಪ್ಪಿಕೊಂಡವರು ಶಾರೂಖ್.. ಆ ಅಪ್ಪುಗೆಯಲ್ಲಿ ಪ್ರೀತಿ ಇತ್ತು. ಬದುಕಿ ಬಂದೆಯಲ್ಲ ಮಾರಾಯ ಎಂಬ ಭಾವವಿತ್ತು.
ಪಂದ್ಯ ಆಗತಾನೆ ಮುಗಿದಿತ್ತು. ಒಂದೆಡೆ ಕುಳಿತಿದ್ದ ಪಂತ್ ಆತ್ತ ನೋಡಿದರೆ ಶಾರೂಖ್ ಖಾನ್. ಅವರು ರುಷಭ್ ಅವರತ್ತ ಬರತೊಡಗಿದ್ದರು. ಆಗ ಎದ್ದು ನಿಲ್ಲಲು ಮುಂದಾದರು ದೆಹಲಿ ಕ್ಯಾಪ್ಟನ್. ನೋ ನೋ.. ಎಂದ ಶಾರೂಖ್ ಪಂತ್ ಗೆ ಕುಳಿತಿರಿ ನಿಂತುಕೊಳ್ಳಬೇಡಿ ಎಂದು ಸನ್ನೆ ಮಾಡಿದರು.
ನಂತರ ಇನ್ನೂ ಕೆಲವರು ಇವರನ್ನು ಸೇರಿಕೊಂಡರು. ಸೆಲಿಬ್ರೀಟಿಗಳ ಮಾತು ಹಾಗೇ ಮುಂದುವರಿದಿತ್ತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ