ಮಯಾಂಕ್ ಯಾದವ್. ಈ ಹೆಸರು ಖ್ಯಾತ ಬ್ಯಾಟರುಗಳ ತೊಡೆಯನ್ನು ನಡಗಿಸುತ್ತದೆ. ಈ ಬಾರಿಯ ಐ ಪಿ ಎಲ್ ನಲ್ಲಿ ಮೂಡಿಬಂದ ಹೊಸ ತಾರೆ. ಅವರ ಬೌಲಿಂಗ್ ನ ವೇಗ ಮಾರಕ. ಜೊತೆಗೆ ಅವರ ಬತ್ತಳಿಕೆಯಲ್ಲಿ ಇರುವ ಅಸ್ತ್ರಗಳು..ಅಬ್ಬಬ್ಬಾ… ವೇಗದ ಬೌಲಿಂಗ್ ನಲ್ಲಿಈ ರೀತಿ ಬೌಲ್ ಮಾಡುವ ಇನ್ನೊಬ್ಬರಿಲ್ಲ. ಅವರೀಗ ತಮ್ಮ ಮನಸ್ಸಿನಲ್ಲಿ ಇರುವುದನ್ನು ಹೊರಹಾಕಿದ್ದಾರೆ.

ನಾನು ಭಾರತದ ಪರವಾಗಿ ಆಡಬೇಕು. ಭಾರತವನ್ನು ಪ್ರತಿನಿಧಿಸಬೇಕು. ಇದೇ ನನ್ನ ಆಸೆ ಎಂದಿದ್ದಾರೆ ಮಯಾಂಕ್.
ನಾನು ಅತ್ಯುತ್ತಮ ಬೌಲಿಂಗ್ ಮಾಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇನೆ. ಅಹಾರದಲ್ಲಿ ನಾನು ಕಟ್ಟುನಿಟ್ಟು. ಹಾಗೇ ಅತ್ಯುತ್ತಮ ತರಬೇತಿ. ವೇಗದ ಬೌಲಿಂಗ್ ಗೇ ಈ ರೀತಿಯ ತಯಾರಿ ಬೇಕು ಎನ್ನುತ್ತಾರೆ ಮಯಾಂಕ್.

ಅವರು ನಿನ್ನೆಯ ಪಂದ್ಯದಲ್ಲಿ ಮಾಡಿದ ಬೌಲಿಂಗ್ ಕೂಡ ಹಾಗೆ ಇತ್ತು. ಅವರು ಎಸೆದ ಬೌಲಿನ ವೇಗ ಒಂದೆಡೆಯಾದರೆ ಸ್ವಿಂಗ್ ಇನ್ನೊಂದೆಡೆ. ಅದು ಎತ್ತ ತಿರುಗತ್ತೆ ಎಂಬುದು ಊಹೆಗೂ ಮೀರಿದ್ದು. ಜೊತೆಗೆ ಎಕ್ಯುರೇಟ್ ಬೌಲಿಂಗ್.

ಭಾರತ ಒಂದು ಕಾಲದಲ್ಲಿ ಕೇವಲ ಸ್ಪಿನ್ ಬೌಲಿಂಗ್ ಗೆ ಮಾತ್ರ ಕ್ಯಾತಿ ಪಡೆದಿತ್ತು. ಇಲ್ಲಿನ ಪಿಚ್ ಗಳು ವೇಗದ ಬೌಲಿಂಗ್ ಗೆ ಸಹಕಾರಿ ಆಗಿರಲಿಲ್ಲ. ಆದರೆ ಕಪಿಲ್ ದೇವ್ ಆಗಮನದೊಂದಿಗೆ ಇದು ಬದಲಾಗತೊಡಗಿತು. ನಂತರ ಜಾವಗಲ್ ಶ್ರೀನಾಥ್ ಬಂದರು. ಹಲವು ವೇಗದ ಬೌಲರುಗಳು ಇದನ್ನು ಬದಲಿಸಿದರು. ಆದರೆ ಯಾರೂ ಮಯಾಂಕ್ ಅವರಂತೆ ಬೌಲ್ ಮಾಡಿರಲಿಲ್ಲ. ಈ ವೇಗ ಇರಲಿಲ್ಲ. ಈಗ ಮತ್ತೊಂದು ಯುಗ ಪ್ರಾರಂಭವಾಗಿದೆ. ಅವರು ಯಾವಾಗ ಭಾರತ ತಂಡವನ್ನು ಪ್ರತಿನಿಧಿಸುತ್ತಾರೆ ಎಂಬುದು ಮಾತ್ರ ಈಗಿನ ಕುತೂಹಲ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ