ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಇನ್ನೂ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದೆಹಲಿ ನ್ಯಾಯಾಲಯ ಇಂದು ಈ ತೀರ್ಪು ನೀಡಿದೆ.

ಅಬಕಾರಿ ನೀತಿ ಕುರಿತ ಹಗರಣದ ಆರೋಪಿಯಾಗಿರುವ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿತ್ತು. ಇಡಿ ಕಾನೂನು ಎಷ್ಟು ಬಲಿಷ್ಟ ಆಗಿದೆ ಎಂದರೆ ಈ ಕಾನೂನಿನ ಅಡಿ ಬಂಧಿತರಾದವರಿಗೆ ಜಾಮೀನು ಸಿಗುವುದು ಸುಲಭವಲ್ಲ.

ಈಗಾಗಲೇ ದೆಹಲಿ ಉಪಮುಖ್ಯಮಂತ್ರಿಯಾಗಿದ್ದ ಮನೀಷ್ ಸಿಸೋಡಿಯಾ ಕಳೆದ ಒಂದು ವರ್ಷಕ್ಕಿಂತ ಹೆಚ್ಚು ಕಾಲದಿಂದ ಜೈಲಿನಲ್ಲಿದ್ದಾರೆ. ಅವರ ಜೊತೆ ಇನ್ನೂ ಮೂವರನ್ನು ಜೈಲಿಗೆ ಅಟ್ಟಲಾಗಿದೆ.

ಈಗಿರುವ ಪ್ರಶ್ನೆ ಮುಂಬರುವ ಲೋಕಸಭಾ ಚುನಾವಣೆಗೆ ಮೊದಲು ಅರವಿಂದ್ ಕೇಜ್ರಿವಾಲ್ ಜೈಲಿನಿಂದ ಹೊರಗೆ ಬರಬಹುದೆ ಎಂಬುದು ? ಈಗಿನ ಪರಿಸ್ಥಿತಿ ಗಮನಿಸಿದರೆ ಹೀಗೆ ಎಂದು ಹೇಳುವುದು ಕಷ್ಟ. ಹಾಗೆ ಆಮ್ ಆದ್ಮಿ ಪಕ್ಷದ ಬೇರೆ ನಾಯಕರಲ್ಲಿ ಯಾರು ಜೈಲಿಗೆ ಹೋಗುತ್ತಾರೆ ಎಂದು ಊಹಿಸುವುದು ಕಷ್ಟ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ