ಬೆಂಗಳೂರು : ಇವತ್ತು ಸಂಸತ್ ಸದಸ್ಯೆ ಸುಮಲತಾ ಅವರನ್ನು ಮಾಜಿ ಮುಖ್ಯಮಂತ್ರಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಮಾತುಕತೆಯ ನಂತರ ಉದ್ಭವವಾದ ಪ್ರಶ್ನೆ ಎಂದರೆ ಸುಮಲತಾ ತಣ್ಣಗಾದರಾ ? ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಲು ಒಪ್ಪಿದರಾ ? ಸಭೆಯ ನಂತರ ಮಾತನಾಡಿದ ಕುಮಾರಸ್ವಾಮಿ ಇಂತಹ ಇಂಗಿತವನ್ನು ವ್ಯಕ್ತಪಡಿಸಿದರು. ಸುಮಲತಾ ಕೂಡ ಇದು ಸ್ಪೀಡ್ ಬ್ರೇಕರ್ ಇದ್ದಂತೆ. ಮುಂದೆ ಮತ್ತೆ ಫಾಸ್ಟ್ ಆಗಿ ಹೋಗ್ತೀನಿ ಎಂದರು.

ಜೊತೆಗೆ ಬಿಜೆಪಿ ನನಗೆ ಟಿಕೆಟ್ ನೀಡದೇ ಬೇರೆಯವರಿಗೆ ನೀಡಿದ್ದರೆ ಆಗ ಪರಿಸ್ಥಿತಿ ಬೇರೆಯಾಗುತ್ತಿತ್ತು. ಆದರೆ ಮೈತ್ರಿ ಪಕ್ಷಕ್ಕೆ ಸೀಟು ನೀಡಿದ್ದಾರೆ ಎಂದು ಬಿಜೆಪಿಯನ್ನು ಅಪ್ರತ್ಯಕ್ಷವಾಗಿ ಸಮರ್ಥಿಸಿಕೊಂಡರು.

ಇದರ ಅರ್ಥ ಸುಮಲತಾ ಸ್ವಲ್ಪ ತಣ್ಣಗಾಗಿದ್ದಾರೆ ಎಂಬುದನ್ನು ತೋರಿಸಿಕೊಡುತ್ತದೆ ಅಷ್ಟೇ.
ಮೂಲವೊಂದರ ಪ್ರಕಾರ ಈ ಸಭೆಯಲ್ಲಿ ಕುಮಾರಸ್ವಾಮಿ ಭರವಸೆಯೊಂದನ್ನು ನೀಡಿದ್ದಾರೆ. ಅಭಿಷೇಕ್ ಅಂಬರೀಷ್ ಅವರ ರಾಜಕೀಯ ಬದುಕಿಗೆ ನಾನು ಬೆಂಬಲವಾಗಿ ನಿಲ್ತೀನಿ. ಅವರು ಮಂಡ್ಯದಿಂದ ಸ್ಪರ್ಧಿಸಲು ಬಯಸಿದಾಗ ಸೀಟು ಬಿಟ್ಟು ಕೊಡ್ತೀನಿ ಎಂದಿದ್ದಾರೆ.

ಈ ಮಾತು ಸುಮಲತಾ ಅವರ ಮನಸ್ಸನ್ನು ಬದಲಿಸಿದೆ. ಮಗನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಅವರು ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಅವರು ತಮ್ಮ ನಿರ್ಧಾರವನ್ನು ಈ ಸಂದರ್ಭದಲ್ಲಿ ಪ್ರಕಟಿಸಿಲ್ಲ. ಬದಲಾಗಿ ಏಪ್ರಿಲ್ ೩ ರಂದು ಮಂಡ್ಯದಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ಈ ಸಭೆಯಲ್ಲಿ ಅಭಿಷೇಕ್ ಮತ್ತು ಡಿ ಬಾಸ್ ಕೂಡ ಇರುತ್ತಾರೆ ಎಂದಿದ್ದಾರೆ.
ಈ ಸಭೆಯ ನಂತರ ಏಪ್ರಿಲ್ ೪ ರಂದು ಕುಮಾರಸ್ವಾಮಿ ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ